12
Sep

ಪತ್ರಿಕಾ ಪ್ರಕಟಣೆ

“ಸಮಾಜ ಪರಿವರ್ತನೆಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ – ಅಪ್ಸರ್ ಕೊಡ್ಲಿಪೇಟೆ”

ಗುಲ್ಬರ್ಗಾ, ಸೆಪ್ಟೆಂಬರ್ 11:
ಇಂದು ಗುಲ್ಬರ್ಗಾದಲ್ಲಿ ನಡೆದ ಎಸ್‌ಡಿಪಿಐ ನಾಯಕರ ಸಭೆಯಲ್ಲಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರು “ಸಮಾಜ ಪರಿವರ್ತನೆಗೆ ಪ್ರತಿಯೊಬ್ಬರ ಕೊಡುಗೆ” ಎಂಬ ವಿಷಯದ ಕುರಿತು ಪ್ರಮುಖ ಭಾಷಣ ಮಾಡಿದರು.

ತಮ್ಮ ಭಾಷಣದಲ್ಲಿ ಅವರು ಹೇಳಿದರು:
“ಸಮಾಜದಲ್ಲಿ ಬದಲಾವಣೆ ತರಲು ಕೇವಲ ಕನಸು ಕಾಣುವುದು ಸಾಕಾಗುವುದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಬದಲಾವಣೆಯ ಹಾದಿ ದೀರ್ಘ ಮತ್ತು ಕಠಿಣವಾಗಿದ್ದರೂ, ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನ್ಯಾಯ, ಸಮಾನತೆ ಮತ್ತು ಸಹೋದರತ್ವವನ್ನು ಸ್ಥಾಪಿಸಲು ನಂಬಿಕೆ, ಶ್ರಮ ಮತ್ತು ಬದ್ಧತೆ ಅಗತ್ಯ. ಎಸ್‌ಡಿಪಿಐ ಸದಸ್ಯರು ತಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಸಮಾಜಮುಖಿ ಹೋರಾಟಗಳಿಗೆ ಸಮರ್ಪಿಸಬೇಕು.”

“ಇಂದಿಗೂ ಸಾವಿರಾರು ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಬಡವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಹಕ್ಕುಗಳಿಗಾಗಿ ನಮ್ಮ ಕಾರ್ಯಕರ್ತರು ಪೊಲೀಸ್ ದೌರ್ಜನ್ಯ, ಸುಳ್ಳು ಕೇಸುಗಳು ಮತ್ತು ಬಂಧನಗಳನ್ನು ಸಹಿಸಿಕೊಂಡಿದ್ದಾರೆ. ಇದು ಅವರ ಬದ್ಧತೆಯ ಸಾಕ್ಷಿಯಾಗಿದೆ. ಎಸ್‌ಡಿಪಿಐ ಕೇವಲ ರಾಜಕೀಯ ಪಕ್ಷವಲ್ಲ, ಇದು ಶೋಷಿತರ ಕೂಗಿನ ಪ್ರತಿಧ್ವನಿ, ಸಾಮಾನ್ಯ ಜನರ ಕನಸುಗಳ ಪ್ರತೀಕ. ಹೀಗಾಗಿ ಪ್ರತಿಯೊಬ್ಬ ನಾಯಕ, ಕಾರ್ಯಕರ್ತ ಮತ್ತು ಅಭಿಮಾನಿ ತಮ್ಮ ಪಾತ್ರವನ್ನು ಅರಿತು, ಈ ಬದಲಾವಣೆಯ ಹಾದಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು,” ಎಂದು ಅವರು ಒತ್ತಿಹೇಳಿದರು.

ಸಭೆಯಲ್ಲಿ ಕಲಬುರಗಿ ಜಿಲ್ಲೆಯ ರೈತರ ಮೇಲಿನ ನಡೆಯುತ್ತಿರುವ ವಂಚನೆಗಳ ವಿಷಯವೂ ಚರ್ಚಿಸಲಾಯಿತು. ರೈತ ಸಂಪರ್ಕ ಕೇಂದ್ರಗಳಲ್ಲಿ ಅವಧಿ ಮೀರಿದ ಕ್ರಿಮಿನಾಶಕ ಮತ್ತು ಗೊಬ್ಬರಗಳನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಕೆಲ ಅಂಗಡಿಗಳು ಎಂಆರ್‌ಪಿ ದರಕ್ಕಿಂತ ಎರಡು ಪಟ್ಟು ಹಣ ಪಡೆದು ಗೊಬ್ಬರವನ್ನು ಮಾರಾಟ ಮಾಡುತ್ತಿರುವುದು ಗಂಭೀರ ಅನ್ಯಾಯವಾಗಿದೆ ಎಂದು ಜಿಲ್ಲಾಧ್ಯಕ್ಷ ಮೊಹಮ್ಮದ್ ಮೋಹಿಸಿನ್ ಖಂಡಿಸಿದರು. ರೈತರನ್ನು ಮೋಸಗೊಳಿಸಿದ ಅಂಗಡಿ ಮಾಲೀಕರು ಮತ್ತು ಕೃಷಿ ಇಲಾಖೆಯ ನಿರ್ಲಕ್ಷ್ಯಕ್ಕೆ ವಿರುದ್ಧವಾಗಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಇದರ ಜೊತೆಗೆ ರೈತರ ಸಂಕಷ್ಟ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ವಿಚಾರಗಳ ಮೇಲೂ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರೊಫೆಸರ್ ಸೈಯದಾ ಸಾದಿಯಾ ಹಾಗೂ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಹೀಮ್ ಪಟೇಲ್ ರವರು ಸಂಘಟನೆಯ ಬಲವರ್ಧನೆ ಮತ್ತು ನಿಧಿ ಸಂಗ್ರಹಣೆಯ ಅಗತ್ಯತೆಯ ಕುರಿತು ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಮಕ್ಬೂಲ್ ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಡಾ. ರಿಜ್ವಾನ್ ಮತ್ತು ಇಬ್ರಾಹಿಂ ಪಟೇಲ್, ವುಮೆನ್ ಇಂಡಿಯಾ ಮೂವ್‌ಮೆಂಟ್ ಜಿಲ್ಲಾ ಅಧ್ಯಕ್ಷೆ ಸೇರಿದಂತೆ ಜಿಲ್ಲಾ ಸಮಿತಿ ಸದಸ್ಯರು ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದ ನಾಯಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

14
Aug

ಸಂತಾಪ

ಸುಲೈಮಾನ HSS ನಮ್ಮ ಪಕ್ಷದ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲೆಯ PI (ಮಂಗಳೂರು ಗ್ರಾಮಾಂತರ) ಸಾಲೆತ್ತೂರು ಕಟ್ಟತ್ತಿಲ ನಿವಾಸಿ ಸುಲೈಮಾನ್ HSS ರವರ ನಿಧನ ವಾರ್ತೆಯು ಅತೀವ ದುಃಖ ತಂದಿದೆ. ಸಾಮಾಜಿಕ ಕಳಕಳಿಯ ವ್ಯಕ್ತಿತ್ವ

12
Aug
29
Dec

ಕನ್ನಡಪರವಾದ ಸರ್ಕಾರದ ನಿಯಮಗಳನ್ನು, ಸರ್ಕಾರ ಸರಿಯಾಗಿ ಜಾರಿಗೆ ತಂದಿದ್ದಿದ್ದರೇ ನಾರಾಯಣಗೌಡರು ಬೀದಿಗೆ ಬರಬೇಕಿರಲಿಲ್ಲ. ಅವರ ಬಂಧನವೂ ಆಗಬೇಕಿರಲಿಲ್ಲ.

ಭಟ್ಟನ ಬಂಧನ ಆಗಿದ್ದಿದ್ದರೇ, ಸಾವಿರಾರು ಸಂಖ್ಯೆಯ ಹೆಣ್ಮಕ್ಕಳು ಬೀದಿಗೆ ಬಂದು ನ್ಯಾಯ ಕೇಳಿ ಸೆಕ್ಷನ್ 110 ಮತ್ತು 107 ಅಡಿಯಲ್ಲಿ ಕೇಸ್ ಹಾಕಿಸಿಕೊಂಡು ದಂಡಾಧಿಕಾರಿಗಳ ನ್ಯಾಯಲಯಕ್ಕೆ ಅಲೆಯಬೇಕಿರಲಿಲ್ಲ. ಇದು ನಮ್ಮ ಸರ್ಕಾರ! ದಲಿತ, ಅಲ್ಪಸಂಖ್ಯಾತ