12
Dec

ನಿನ್ನೆ ಬೆಂಗಳೂರಿನಲ್ಲಿ ನಡೆದ ಒಳಮೀಸಲಾತಿ ಹೋರಾಟಗಾರರ ಬಂಧನ ಮತ್ತು ಲಾಠಿ ಚಾರ್ಜ್ ಖಂಡಿಸಿ‌, ಬೆಂಗಳೂರಿನಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟವನ್ನು ಬೆಂಬಲಿಸಿ, ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮತ್ತು ಇ.ಡ‌ಬ್ಲ್ಯು.ಎಸ್‌ ಮಸೂದೆ ರೀತಿಯಲ್ಲೇ

11
Dec

ಒಳ ಮೀಸಲಾತಿ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಗೊಳಿಸಲು SDPI ಆಗ್ರಹ
ಬೆಂಗಳೂರು ಡಿಸೆಂಬರ್ -11;
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಹೋರಾಟ ಗಾರರನ್ನು ಬಂಧಿಸಿದ ಬಿಜೆಪಿ ಸರಕಾರದ ಕ್ರಮ ಸಂವಿಧಾನಕ್ಕೆ ಎಸಗುವ ಅಪಚಾರವಾಗಿದೆ. ಹೋರಾಟಗಾರರ ಬೇಡಿಕೆಗೆ ಸ್ಪಂದಿಸಿ, ನ್ಯಾಯ ಕೊಡುವುದು ಬಿಟ್ಟು ಸರಕಾರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಇಳಿದಿರುವುದು ಖಂಡನಾರ್ಹ. ಮಾತ್ರವಲ್ಲ 62 ವರ್ಷ ಪ್ರಾಯದ ಹೋರಾಟಗಾರರೊಬ್ಬರ ತಲೆಗೆ ಪೊಲೀಸರು ಹಲ್ಲೆ ನಡೆಸಿ ಗಾಯಗೊಳಿಸಿರುವ ಕೃತ್ಯ ಪೊಲೀಸ್ ಇಲಾಖೆಯ ಮೂಲಕ ಸರಕಾರ ನಡೆಸುತ್ತಿರುವ ದರ್ಪವಾಗಿದೆ. ಸರಕಾರ ಕೂಡಲೇ ಹೋರಾಟಗಾರರ ಬೇಡಿಕೆಯನ್ನು ಪರಿಗಣಿಸಬೇಕು ಮತ್ತು ಈ ಕೂಡಲೇ ಬಂಧಿಸಿರುವವರನ್ನು ಬಿಡುಗಡೆಗೊಳಿಸ ಬೇಕೆಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

11
Dec

ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಶಾಸಕನಾಗಿ ಮುಂದಿನ ಚುನಾವಣೆಯಲ್ಲಿ “ನನಗೆ ಓಟ್ ಹಾಕದಿದ್ದರೆ ಯಾವ ಕೆಲಸನೂ ಮಾಡಿ ಕೊಡಲ್ಲ” ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ BJP ಶಾಸಕ ಪ್ರೀತಮ್ ಗೌಡ ರವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ರಾಜ್ಯಪಾಲರಲ್ಲಿ ಆಗ್ರಹಿಸುತ್ತೇನೆ.
ಒಬ್ಬ ಶಾಸಕನಾಗಿ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪರಿಜ್ಞಾನ ಇಲ್ಲದ ಇಂತಹ ನಾಯಾಲಕ್ ಜನ ಪ್ರತಿನಿಧಿಗೆ
ಮುಂದಿನ ಚುನಾವಣೆಯಲ್ಲಿ ಹಾಸನದ ಜನತೆ ತಕ್ಕ ಪಾಠ ಕಲಿಸಬೇಕು. ಆರುವರೆ ಕೋಟಿ ಕರ್ನಾಟಕದ ಜನರು ಕಷ್ಟ ಪಟ್ಟು ಬೆವರು ಸುರಿಸಿ ಕಟ್ಟುವ ತೆರಿಗೆ ಹಣದಿಂದ ಪ್ರತಿ ತಿಂಗಳು ಲಕ್ಷಾಂತರ ಸಂಬಳ ಪಡೆಯುವ ನಿಮಗೆ ಶಾಸಕರಾಗುವ ಯೋಗ್ಯತೆ ಇದೆಯೇ?
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI

09
Dec