31
Jan
31
Jan

ಏಕೆ ಒಂದು ಸಮುದಾಯವನ್ನೇ ಗುರಿ ಮಾಡಲಾಗುತ್ತಿದೆ? ಈ ರೀತಿಯ ತಾರತಮ್ಯ ಯಾವ ಕಾರಣಕ್ಕಾಗಿ ಮಾಡಲಾಗುತ್ತಿದೆ?

ಪ್ರವೀಣ್ ನೆಟ್ಟಾರು ಹತ್ಯೆ ಕೇಸಿನಲ್ಲಿ ಅಮಾಯಕ ಎಸ್‌ಡಿಪಿಐ ಪಕ್ಷದ ನಾಯಕರ ಸಹಿತ ಇಪ್ಪತ್ತಕ್ಕೂ ಹೆಚ್ಚು ಅಮಾಯಕ ಮುಸ್ಲಿಂ ಯುವಕರ ಮೇಲೆ ಯುಎಪಿಎ,ಆದರೆ ಮಸೂದ್, ಫಾಸಿಲ್,ಜಲೀಲ್ ಕೊಲೆಗಳನ್ನು ಏಕೆ ಎನ್ಐಎ ಗೆ ವಹಿಸಲಿಲ್ಲ? ಏಕೆ ಒಂದು

31
Jan
30
Jan
30
Jan
30
Jan
28
Jan

ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023
ಮೈಸೂರು ಗ್ರಾಮಾಂತರ ಜಿಲ್ಲೆ ಎಸ್‌ಡಿಪಿಐ ಪಕ್ಷದ ಚುನಾವಣಾ ಪೂರ್ವಭಾವಿ ಸಭೆ
ಮೈಸೂರು, 27 ಜನವರಿ 2023: ಮೈಸೂರು ಗ್ರಾಮಾಂತರ ಜಿಲ್ಲೆಯ ಚುನಾವಣಾ ಪೂರ್ವಭಾವಿ ಸಭೆಯು ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ವಿಧಾನಸಭಾ ಚುನಾವಣಾ ಉಸ್ತುವಾರಿಗಳಾದ ಅಪ್ಸ‌ರ್ ಕೊಡ್ಲಿಪೇಟೆ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ತುಂಬೆ ಇವರ ಉಪಸ್ಥಿತಿಯಲ್ಲಿ ನಡೆಯತು. ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿ ನಾಲ್ಕು ಅಭ್ಯರ್ಥಿಗಳ ಹೆಸರುಗಳನ್ನು ರಾಜ್ಯ ಸಮಿತಿಯ ಅನುಮೋದನೆಗಾಗಿ ಕಳಿಸಿಕೊಡಲು ತೀರ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಪ್ಪ‌ರ್ ಕೊಡ್ಲಿಪೇಟೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಲು ಕರೆ ನೀಡಿದರು. ಈಗಾಗಲೇ 54 ವಿಧಾನಸಭಾ ಕ್ಷೇತ್ರಗಳ ಪ್ರಥಮ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ ರವರು ಬಿಡುಗಡೆ ಮಾಡಿದ್ದು, ಶೀಘ್ರವೇ ರಾಜ್ಯ ಸಮಿತಿಯಿಂದ ದ್ವಿತೀಯ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಭೆಯಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಮಜಾಝ್ ಅಹಮದ್‌, ಪ್ರಧಾನ ಕಾರ್ಯದರ್ಶಿ ಸೈಯದ್ ಅಕ್ಬರ್ , ಸಂಘಟನಾ ಕಾರ್ಯದರ್ಶಿ ಲಿಯಾಕತ್ ಅಲಿ, ಹುಣಸೂರು ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಮುಸ್ತಫ ಖಾನ್ ಹಾಗೂ ನಗರಸಭಾ ಸದಸ್ಯರಾದ ಸೈಯದ್‌ ಯೂನುಸ್ ಪಾಲ್ಗೊಂಡಿದ್ದರು.