18
Aug

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯಾದ್ಯಂತ ಇರುವ 54 ಸಾವಿರ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಒಟ್ಟು 1.70 ಲಕ್ಷ ಮಂದಿ ಅಡುಗೆಯರು ಹಾಗೂ ಅಡುಗೆ ಸಹಾಯಕಿಯರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಸರಿಯಷ್ಟೆ. ಹೀಗೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಸರ್ಕಾರ ಕಳೆದ ಐದು ತಿಂಗಳಿಂದ ಗೌರವ ಧನ ನೀಡದೆ ಇರುವುದು ಅತ್ಯಂತ ಖೇದಕರ. ಈಗಾಗಲೇ ಲಾಕ್ ಡೌನ್ ನಿಂದಾಗಿ ಇತರೆ ಬೇರೆ ಕೆಲಸ ಸಹ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಡುಗೆ ಸಿಬ್ಬಂದಿ ವರ್ಗದವರಿಗೆ ಸರ್ಕಾರ ಸಹ ಗೌರವ ಧನ ನೀಡದೆ ಇರುವುದರಿಂದ ಅವರ ಜೀವನ ಅಸ್ತವ್ಯಸ್ತವಾಗಿದೆ.

ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಡಿ. ಗ್ರೂಪ್ ನೌಕರರ ಸಂಖ್ಯೆ ಕಡಿಮೆ ಇದ್ದು, ಕೆಲವು ಶಾಲೆಗಳಲ್ಲಿ ಡಿ. ಗ್ರೂಪ್ ನೌಕರರು ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಡುಗೆಯವರು ಹಾಗೂ ಅಡುಗೆ ಸಹಾಯಕಿಯರಿಗೆ ತಮ್ಮ ಅಡುಗೆ ಕೆಲಸದ ಜೊತೆ ಜೊತೆಯಲ್ಲೇ ಶಾಲೆಯ ಸ್ವಚ್ಛತೆ ಮತ್ತು ಇತರೆ ಕೆಲಸ ಸಹ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗೆ ಶಾಲೆಗಳಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿ ವರ್ಗದವರಿಗೆ ಸರ್ಕಾರ ಅವರ ಸೇವೆಗೆ ತಕ್ಕ ಪ್ರತಿಫಲ ನೀಡ ಬೇಕಾಗಿರುವುದರಿಂದ ಈ ಕೂಡಲೇ ಕಳೆದ ಐದು ತಿಂಗಳ ಗೌರವ ಧನವನ್ನು ಏಕಕಾಲಕ್ಕೆ ಪಾವತಿಸಿಸ ಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

Leave A Comment