ಕ್ರೈಸ್ತರ ಮೇಲಿನ ದಾಳಿ: ಎಸ್.ಡಿ.ಪಿ.ಐ ಸಹಿಸುವುದಿಲ್ಲಮಂಗಳೂರು, 28 ಅಕ್ಟೋಬರ್ 2021: ರಾಜ್ಯದ ವಿವಿಧ ಕಡೆಗಳಲ್ಲಿ ಕ್ರೈಸ್ತ ಸಮುದಾಯದ ಧರ್ಮ ಗುರುಗಳು, ಚರ್ಚ್, ಸೇವಾ ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಸುಳ್ಳು ಕೇಸುಗಳನ್ನು ದಾಖಲಿಸಿ ಕ್ರೈಸ್ತ ಧಾರ್ಮಿಕ ಮುಖಂಡರುಗಳನ್ನು ಬಂಧಿಸುತ್ತಿರುವ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಸಹಿಸುವುದಿಲ್ಲ. ಕ್ರೈಸ್ತ ಸಂಘಟನೆಗಳ ಕಾನೂನು ಹೋರಾಟ ಮತ್ತು ಶಾಂತಿಯುತ ಪ್ರತಿಭಟನೆಗಳಿಗೆ ಎಸ್.ಡಿ.ಪಿಐ ಬೆಂಬಲಿಸುತ್ತದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊರವರು ಮಂಗಳೂರಿನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿರುವ ಕ್ರೈಸ್ತ ಶಿಕ್ಷಣ, ಆರೋಗ್ಯ, ಮತ್ತಿತರ ಸೇವಾ ಸಂಸ್ಥೆಗಳಲ್ಲಿ ಲಕ್ಷಾಂತರ ಹಿಂದು, ಮುಸ್ಲಿಮ್, ಭಾಂದವರು ಪ್ರಯೋಜನ ಪಡೆಯುತ್ತಿದ್ದಾರೆ. ಎಲ್ಲಿಯೂ ಮತಾಂತರಕ್ಕೆ ಒತ್ತಾಯ, ಪ್ರೇರಣೆ ನೀಡಿದ ಉದಾಹರಣೆಗಳಿಲ್ಲ. ಆದರೂ ಸುಳ್ಳು ಆರೋಪ ಹೊರಿಸಿ ಬಿ.ಜೆ.ಪಿ ಬೆಂಬಲಿತ ಸಂಘಟನೆಗಳು ಕ್ರೈಸ್ತರ ವಿರುದ್ಧ ದಾಳಿ-ಅಪಪ್ರಚಾರ ಮಾಡುವುದು ಖಂಡನೀಯ ಎಂದರು. ರಾಜ್ಯ ಉಪಾಧ್ಯಕ್ಷರಾದ ಅಡ್ವಕೇಟ್ ಅಬ್ದುಲ್ ಮಜೀದ್ ಖಾನ್ ಮಾತನಾಡಿ ರಾಜ್ಯ ಸರಕಾರವು ಕೇವಲ ಕ್ರೈಸ್ತರ ಪ್ರಾರ್ಥನಾ ಮಂದಿರ, ಧರ್ಮ ಗುರುಗಳು, ಆಸ್ತಿ ಪಾಸ್ತಿಗಳ ಸರ್ವೇ ನಡೆಸಬೇಕೆಂದು ಸರ್ಕಾರ ಅಧಿಕಾರಿಗಳಿಗೆ ಆದೇಶ ನೀಡಿರುವುದು ಸರಿಯಲ್ಲ. ಪಿ.ಯು.ಸಿ.ಎಲ್ ಸಂಘಟನೆ ಸಲ್ಲಿಸಿದ ತಕರಾರು ಅರ್ಜಿಯನ್ನು ಹೈಕೋರ್ಟ್ ಆಲಿಸಿದ್ದು ಈ ಬಗ್ಗೆ ರಾಜ್ಯ ಸರಕಾರಕ್ಕೆ ನೋಟಿಸು ನೀಡಿರುತ್ತದೆ. ಕೇವಲ ಒಂದು ಧರ್ಮದ ಮೇಲೆ ಸಂಶಯ ಬರುವ ರೀತಿಯಲ್ಲಿ ಸಮೀಕ್ಷೆ ನಡೆಸುವುದು ಸರಿಯಲ್ಲ. ಸರಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಮ್ ಹಸನ್ ಮಾತನಾಡಿ ಇತ್ತೀಚೆಗೆ ಕೊಡಗು ಮತ್ತು ಹುಬ್ಬಳ್ಳಿಯಲ್ಲಿ ನಡೆದ ಚರ್ಚ್ ದಾಳಿಯ ಪ್ರದೇಶಕ್ಕೆ ಎಸ್.ಡಿ.ಪಿ.ಐ ಪಕ್ಷದ ನಾಯಕರುಗಳು ಮತ್ತು ಕಾರ್ಯಕರ್ತರು ಭೇಟಿ ನೀಡಿ ಕ್ರೈಸ್ತ ಮತ್ತು ಜಾತ್ಯಾತೀತವಾದಿಗಳು ಆಯೋಜಿಸಿದ್ದ ಜಂಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನವೆಂಬರ್ 20ರಂದು ಕ್ರೈಸ್ತ ಸಂಘಟನೆಗಳು ಬೆಂಗಳೂರಿನಲ್ಲಿ ಹಮ್ಮಿಕೊಂಡ ವಿಧಾನ ಸಭಾ ಚಲೋ ಹೋರಾಟಕ್ಕೆ ಎಸ್.ಡಿ.ಪಿ.ಐ ಪಕ್ಷದ ಬೆಂಬಲವನ್ನು ಘೋಷಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಮತ್ತು ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್ ಪತ್ರಿಕಾ ಗೋಷ್ಟಿಯಲ್ಲಿ ಉಪಸ್ತಿತರಿದ್ದರು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9343342250, 86181203373,555People reached198Engagements-1.3x lowerDistribution scoreBoost post