30
Dec

ನವದೆಹಲಿ, ಡಿಸೆಂಬರ್ 29, 2021: ಕ್ರಿಶ್ಚಿಯನ್ ಸಮುದಾಯದ ವಿರುದ್ಧ ದೇಶಾದ್ಯಂತ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆ ತೀವ್ರ ಖಂಡನೀಯವಾಗಿದ್ದು, ಸಂಘ ಪರಿವಾರವು ದೇಶದ ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಕ್ಷಣ ನಿಲ್ಲಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲಿನ ದಾಳಿಗಳು ಮುಸ್ಲಿಮರ ಮೇಲಿನ ದಾಳಿಯಷ್ಟು ವ್ಯಾಪಕವಾಗಿಲ್ಲದಿದ್ದರೂ ಹೊಸ ವಿಷಯವೇನಲ್ಲ. ದೇಶದಲ್ಲಿ ಮುಸ್ಲಿಮರು ಸ್ವಾತಂತ್ರ್ಯಪೂರ್ವದಲ್ಲಿಯೇ ಸಂಘಪರಿವಾರದ ನಿರಂತರ ಆಕ್ರಮಣಗಳಿಗೆ ತುತ್ತಾಗಿದ್ದಾರೆ. ಆದರೆ ಸ್ವಾತಂತ್ರ್ಯದ ನಂತರ ಮುಸ್ಲಿಮರ ವಿರುದ್ಧದ ದಾಳಿಗಳು ಮತ್ತಷ್ಟು ತೀವ್ರಗೊಂಡಿವೆ ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿಗಳು ಆರಂಭಗೊಂಡಿವೆ ಎಂದು ತಿಳಿಸಿದ್ದಾರೆ.*ಆರೆಸ್ಸೆಸ್ಸ್ ನ ಸೈದ್ಧಾಂತಿಕ ಗುರು ಮತ್ತು ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಪ್ರಕಾರ ಕ್ರಿಶ್ಚಿಯನ್ನರು ದೇಶದ ಎರಡನೇ ಆಂತರಿಕ ಶತ್ರುವಾಗಿದ್ದಾರೆ. ಆದ್ದರಿಂದ, ಕ್ರಿಶ್ಚಿಯನ್ನರು ಈ ಮತಾಂಧರ ಹೊಸ ಬೇಟೆಯೇನಲ್ಲ. ಈ ಬಾರಿಯ ಕ್ರಿಸ್ಮಸ್ ಸಂದರ್ಭದಲ್ಲಿ ದೇಶಾದ್ಯಂತ ಕ್ರಿಶ್ಚಿಯನ್ ಸಮುದಾಯ ಮತ್ತು ಅವರ ಆರಾಧನಾ ಸ್ಥಳಗಳ ಮೇಲೆ ಭಯೋತ್ಪಾದಕ ಹಿಂದುತ್ವ ಫ್ಯಾಶಿಸ್ಟ್ ಶಕ್ತಿಗಳು ವಿಧ್ವಂಸಕ ಕೃತ್ಯ ಮತ್ತು ಹಿಂಸಾಚಾರವೆಸಗಿದವು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕ್ರಿಸ್ಮಸ್ ಮುನ್ನಾದಿನ ಮತ್ತು ಕ್ರಿಸ್ಮಸ್ ದಿನದಂದು ಏಳು ದಾಳಿ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿವೆ.ಅವುಗಳಲ್ಲಿ ಕೆಲವು: • ಆಗ್ರಾದಲ್ಲಿ, ತೀವ್ರ-ಬಲಪಂಥೀಯ ಹಿಂದುತ್ವ ಸಂಘಟನೆಯ ಸದಸ್ಯರು ಮಿಷನರಿ ಶಾಲೆಯ ಹೊರಗೆ ಸಾಂತಾ ಕ್ಲಾಸ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದರು.• ಅಸ್ಸಾಮ್ ನಲ್ಲಿ ಇಬ್ಬರು ಪ್ರತಿಭಟನಕಾರರು ಕೇಸರಿ ವಸ್ತ್ರಧರಿಸಿ ಕ್ರಿಸ್ಮಸ್ ಮುನ್ನಾದಿನ ಚರ್ಚ್ ಗೆ ಅತಿಕ್ರಮ ಪ್ರವೇಶಿಸಿ ಕ್ರಿಸ್ಮಸ್ ಪೂಜಾ ಪ್ರಕ್ರಿಯೆಗೆ ಅಡ್ಡಿಪಡಿಸಿದರು.• ಹರಿಯಾಣದಲ್ಲಿ ಕ್ರಿಸ್ಮಸ್ ಮುನ್ನಾದಿನದಂದು ಪಟೌಡಿಯ ಶಾಲೆಯಲ್ಲಿ ಸಂಜೆ ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದಾಗ “ಜೈ ಶ್ರೀ ರಾಮ್” ಘೋಷಣೆ ಕೂಗುತ್ತಾ ಶಾಲೆಗೆ ನುಗ್ಗಿದ ಬಲಪಂಥೀಯ ಗುಂಪಿನ ಸದಸ್ಯರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.• ಉತ್ತರ ಪ್ರದೇಶದ ಮತ್ರಿಧಾಮ ಆಶ್ರಮದಲ್ಲಿ ನಡೆಯುತ್ತಿದ್ದ ಕ್ರಿಸ್ಮಸ್ ಕಾರ್ಯಕ್ರಮಕ್ಕೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಆಶ್ರಮದ ಹೊರಗೆ ಜಮಾಯಿಸಿ “ಮತಾಂತರವನ್ನು ನಿಲ್ಲಿಸಿ” ಮತ್ತು “ಮಿಷನರಿ ಮುರ್ದಾಬಾದ್” ಎಂಬ ಘೋಷಣೆಗಳನ್ನು ಕೂಗಿದ್ದರು.2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಕ್ರೈಸ್ತರ ಮೇಲಿನ ದಾಳಿಗಳು ಹೆಚ್ಚಾಗಿವೆ. ವರದಿಯೊಂದರ ಪ್ರಕಾರ, ಕ್ರಿಶ್ಚಿಯನ್ನರ ವಿರುದ್ಧದ ಅಪರಾಧಗಳು 2016 ರಿಂದ 2019 ರವರೆಗೆ ಶೇಕಡಾ 60 ರಷ್ಟು ಹೆಚ್ಚಾಗಿದೆ.ಎಫ್ ಸಿಆರ್ ಎ ನೋಂದಣಿಯನ್ನು ನವೀಕರಿಸಲು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ದತ್ತಿ ಚಟುವಟಿಕೆಗಳನ್ನು ನಿಗ್ರಹಿಸುವ ಪ್ರಯತ್ನ ಬಲಪಂಥೀಯ ಹಿಂದುತ್ವವಾದಿಗಳ ಕ್ರಿಶ್ಚಿಯನ್ ವಿರೋಧಿ ನಿಲುವಿನ ಅತ್ಯಂತ ಆಘಾತಕಾರಿ ಸುದ್ದಿಯಾಗಿದೆ.ಸಂಘ ಪರಿವಾರವು ಮುಸ್ಲಿಮರ ವಿರುದ್ಧ ನಡೆಸುವ ಕೆಟ್ಟ ದ್ವೇಷದ ಮಾದರಿಯನ್ನೇ ಅವರು ಕ್ರಿಶ್ಚಿಯನ್ನರ ವಿರುದ್ಧವೂ ಅನುಸರಿಸುತ್ತಿದ್ದಾರೆ. ಆರೆಸ್ಸೆಸ್ ಸಂಘಟನೆ, ದ್ವೇಷ, ಜನಾಂಗೀಯತೆ ಮತ್ತು ಧಾರ್ಮಿಕ-ದ್ವೇಷದ ಸಿದ್ಧಾಂತದೊಂದಿಗೆ ಬೆಳೆದು ಬಂದಿದೆ. ಅವರ ಅಂತಿಮ ಉದ್ದೇಶ ಇತರ ಧಾರ್ಮಿಕ ಸಮುದಾಯಗಳಿಂದ ಮುಕ್ತವಾದ ಜನಾಂಗೀಯ ಶ್ರೇಷ್ಠತೆಯ ಬ್ರಾಹ್ಮಣವಾದಿ ಹಿಂದುತ್ವ ರಾಷ್ಟ್ರವಾಗಿದೆ. ಅವರು ದೇಶದಲ್ಲಿ ಹಿಂದೂ ಹೊರತಪಡಿಸಿ ಇತರ ಎಲ್ಲಾ ಧಾರ್ಮಿಕ ಸಮುದಾಯಗಳನ್ನು ನಿರ್ಮೂಲನೆ ಮಾಡಲು ಸಿದ್ಧರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು, ಆರೆಸ್ಸೆಸ್ ನ ಹಿಂಸಾಚಾರದ ಸಂತ್ರಸ್ತರು ತಕ್ಷಣ ಎಚ್ಚೆತ್ತುಕೊಂಡು ತಮ್ಮ ನೈಜ ಶತ್ರುವನ್ನು ಅರ್ಥಮಾಡಿಕೊಂಡು ಒಗ್ಗಟ್ಟಿನಿಂದ ಪ್ರತಿರೋಧಿಸಿ, ಆರೆಸ್ಸೆಸ್ ನೇತೃತ್ವದ ತೀವ್ರ ಬಲಪಂಥೀಯ ಹಿಂದುತ್ವ ಪಡೆಗಳ ಜನಾಂಗೀಯ ಕಾರ್ಯಸೂಚಿಯನ್ನು ಸೋಲಿಸಲು ಇದು ಸಕಾಲ ಎಂದು ಎಂ.ಕೆ. ಫೈಝಿ ಹೇಳಿದ್ದಾರೆ.ಕೇಂದ್ರ ಕಚೇರಿಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

Leave A Comment