ಜನವರಿ.23 ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹಿರೇಕೆರೂರು ರಟ್ಟೆಹಳ್ಳಿ ವಿಧಾನಸಭಾ ಕ್ಷೇತ್ರ ಸಮಿತಿಯ ಪ್ರತಿನಿಧಿ ಸಭೆಯು ಪಕ್ಷದ ಜಿಲ್ಲಾ ಅಧ್ಯಕ್ಷರಾದ ಖಾಸಿಮ್ ರಬ್ಬಾನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ಝಕೀರ್ ಚಿತ್ರದುರ್ಗ ನಾಯಕತ್ವ ತರಗತಿ ನೀಡಿ ಚುನಾವಣ ಪ್ರಕ್ರಿಯೆ ನಡೆಸಿಕೊಟ್ಟರು ಜಿಲ್ಲಾಧ್ಯಕ್ಷರಾದ ಖಾಸಿಂ ರಬ್ಬಾನಿಯವರು ಪ್ರಾಸ್ತಾವಿಕವಾಗಿ ಮಾತಾಡಿದರು ನೂತನವಾಗಿ ಅಸ್ಥಿತ್ವಕ್ಕೆ ಬಂದ ಹಿರೇಕೆರೂರು ರಟ್ಟೆಹಳ್ಳಿ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಹಬೀಬ್ ರವರು ಆಯ್ಕೆಯಾದರು.ಉಪಾಧ್ಯಕ್ಷರು ಇಬಾದುಲ್ಲ ಕಾರ್ಯದರ್ಶಿ ಚಮನ್
ಸಹ ಕಾರ್ಯದರ್ಶಿ ಶಾದಾದ್ ಕೋಶಾಧಿಕಾರಿಯಾಗಿ ನೂರುಲ್ಲ ಅವರು ಆಯ್ಕೆಯಾದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೀಲಾನಿ ಕಾರ್ಯಕ್ರಮ ನಿರೂಪಣೆ ಮಾಡಿದರು