23
Apr

ಈ ಘೋರ ದುರಂತಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ SDPI ಒತ್ತಾಯ

2021 ರ ಮೇ 2 ರಂದು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ರೋಗಿಗಳು ಮೃತಪಟ್ಟ ದುರಂತವು ಅಂದಿನ ಬಿ.ಜೆ.ಪಿ ಸರ್ಕಾರದ ನಿರ್ಲಕ್ಷ್ಯ ಮತ್ತು ಆಡಳಿತ ವೈಫಲ್ಯದ ಕಹಿ ಉದಾಹರಣೆಯಾಗಿದೆ. ಈ ದುರಂತದ ನಂತರ ಸಂತ್ರಸ್ತ ಕುಟುಂಬಸ್ಥರಿಗೆ ನ್ಯಾಯ ಕಲ್ಪಿಸುವ ಸಲುವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ನಿರಂತರವಾಗಿ ಹೋರಾಟ ನಡೆಸಿದೆ.

ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್ ರವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆದ ನಿರಂತರ ಹೋರಾಟಗಳು, ಸರ್ಕಾರದ ಪ್ರತಿನಿಧಿಗಳಿಗೆ ಕೊಟ್ಟಂತಹ ಮನವಿ ಪತ್ರಗಳು, ಹಕ್ಕೊತ್ತಾಯ ಮಂಡಿಸಿ ಮಾಡಿದಂತಹ ಸುದ್ದಿಗೋಷ್ಠಿಗಳು ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮಾಡಿದಂತಹ ಪ್ರಯತ್ನ., ಹೀಗೆ ವಿವಿಧ ರೂಪಗಳಲ್ಲಿ ಮಾಡಿದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಕೊನೆಗೂ 5 ವರ್ಷದ ನಂತರ 25 ಮಂದಿಗೆ ಸರ್ಕಾರಿ ಉದ್ಯೋಗ ಸಿಕ್ಕಿರುವುದು, ಹೋರಾಟಕ್ಕೆ ದೊರೆತ ಜಯವಾಗಿದೆ. ಇದು ಸರ್ಕಾರದ ಕೃಪೆಯಲ್ಲ, ಸರ್ಕಾರ ಮಾಡಿದ ತಪ್ಪಿಗೆ ನೀಡಬೇಕಾದ ಪರಿಹಾರ ಮಾತ್ರವಾಗಿದೆ. ಇನ್ನು ಐದಾರು ಸಂತ್ರಸ್ತರಿಗೆ ತಾಂತ್ರಿಕ ಕಾರಣಗಳನ್ನು ನೀಡಿ ಉದ್ಯೋಗ ನೀಡದೆ ಇರುವುದು ವಿಷಾದನೀಯ. ಆಕ್ಸಿಜನ್ ದುರ್ಘಟ್ಟನೆಯನ್ನು ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೊಂಡೇ ಸಂತ್ರಸ್ತರಿಗೆ ಉದ್ಯೋಗ ನೀಡಿರುವಾಗ ಕೆಲವರನ್ನು ಕೈ ಬಿಟ್ಟಿರುವುದು ಸರಿಯಲ್ಲ. ಆದಷ್ಟು ಬೇಗ ಅವರಿಗೂ ಸಹ ಉದ್ಯೋಗ ನೀಡಬೇಕು ಎಂದು ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.

ಬಹಳ ಮುಖ್ಯವಾಗಿ ಈ ದುರಂತಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣಕರ್ತರಾಗಿರುವ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ದ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿದರೆ ಮಾತ್ರ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಿಗಾ ವಹಿಸಲು ಸಾಧ್ಯ. ಸಾರ್ವಜನಿಕರ ಜೀವದ ಜೊತೆ ಆರೋಗ್ಯ ಇಲಾಖೆ ಚೆಲ್ಲಾಟ ಆಡದೆ ಇರುವ ಹಾಗೆ ಇಲಾಖೆಯನ್ನು ಇನ್ನಷ್ಟು ಬಲಪಡಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಮಜೀದ್ ಅಭಿಪ್ರಾಯಿಸಿದ್ದಾರೆ.

ಸಂಪೂರ್ಣವಾಗಿ ನ್ಯಾಯ ದೊರೆಯುವವರೆಗೂ ಎಸ್‌ಡಿಪಿಐ ತನ್ನ ಹೋರಾಟವನ್ನು

Previous Post

Leave A Comment