ಕರಾವಳಿ ಜನರ ಬದುಕು, ಉದ್ಯೋಗ, ವಸತಿ ಮತ್ತು ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಕರಾವಳಿ ಸವೆತ, ಕುಡಿಯುವ ನೀರಿನ ಸಮಸ್ಯೆ, ಉದ್ಯೋಗದ ಅನಿಶ್ಚಿತತೆ ಹಾಗೂ ಮೀನುಗಾರರ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿಗೆ ಸರ್ಕಾರಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
ಈ ನಿಟ್ಟಿನಲ್ಲಿ SDPI ಕೇರಳ ರಾಜ್ಯವು ಹಮ್ಮಿಕೊಂಡಿರುವ ‘ಕರಾವಳಿ ಮುನ್ನಡೆ ಯಾತ್ರೆ’ ಕರಾವಳಿ ಜನರ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಮಹತ್ವದ ಹೋರಾಟವಾಗಿದೆ.
ಈ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 4ರಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ನಡೆಯಲಿದ್ದು, SDPI ಕರ್ನಾಟಕ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಬ್ದುಲ್ ಮಜೀದ್ ಅವರು ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ.
ಕರಾವಳಿ ಜನರ ನ್ಯಾಯಯುತ ಹಕ್ಕುಗಳಿಗಾಗಿ, ಅವರ ಉದ್ಯೋಗ ಮತ್ತು ಬದುಕಿನ ಭದ್ರತೆಗಾಗಿ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಲಿ. ಕರಾವಳಿ ಸಮುದಾಯದ ಧ್ವನಿಯಾಗಿ ಈ ಯಾತ್ರೆ ಸರ್ಕಾರಗಳ ಗಮನ ಸೆಳೆಯಲಿ ಹಾಗೂ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ನಾಂದಿಯಾಗಲಿ ಎಂದು ಹಾರೈಸುತ್ತೇನೆ.
ತೀರವನ್ನು ಕಾಪಾಡೋಣ – ಮೀನುಗಾರರ ಬದುಕನ್ನು ಉಳಿಸೋಣ!
**SDPI ಕೇರಳದ ಕರಾವಳಿ ಮುನ್ನಡೆ ಯಾತ್ರೆಗೆ ಹೃತ್ಪೂರ್ವಕ ಶುಭಾಶಯಗಳು.
