26
Nov

ಅಂಬೇಡ್ಕ‌ರ್

National Constitution Day

ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಭಾರತೀಯ ಸಂವಿಧಾನವು ಕೇವಲ ಪುಸ್ತಕವಲ್ಲ. ಅದು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಮೇಲೆ ನಿಂತಿರುವ ಒಂದು ನೈತಿಕ ಮತ್ತು ರಾಜಕೀಯ ತತ್ವಸಂಹಿತೆ. ಸಂವಿಧಾನದ ಮೂಲ ಉದ್ದೇಶವು ವ್ಯಕ್ತಿಯ ಘನತೆಯನ್ನು ಸಂರಕ್ಷಿಸುವುದು, ಅಧಿಕಾರದ ದುರುಪಯೋಗವನ್ನು ನಿಯಂತ್ರಿಸುವುದು ಮತ್ತು ಪ್ರಜಾಪ್ರಭುತ್ವವನ್ನು ಕೇವಲ ಚುನಾವಣೆಗಳಿಗೆ ಸೀಮಿತಗೊಳಿಸದೆ, ನಿಜವಾದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದತ್ತ ಕೊಂಡೊಯ್ಯುವುದು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಗಳು ಸಂವಿಧಾನದ ಈ ಮೂಲಭೂತ ಉದ್ದೇಶಗಳಿಂದ ದೂರ ಸರಿಯುತ್ತಿವೆ. ವಿರೋಧಾಭಿಪ್ರಾಯವನ್ನು ಕರಾಳ ಕಾನೂನುಗಳ ಮೂಲಕ ನಿಗ್ರಹಿಸುವ,ಮಾತಿನ ಸ್ವಾತಂತ್ರ್ಯವನ್ನು ಅಪರಾಧೀಕರಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಸಂವಿಧಾನಾತ್ಮಕ ಪ್ರಜಾಪ್ರಭುತ್ವಕ್ಕೆ ಗಂಭೀರ ಸವಾಲಾಗಿದೆ.

ಸಂವಿಧಾನವನ್ನು ಕಾಪಾಡುವುದು ಸರ್ಕಾರಗಳ ಜವಾಬ್ದಾರಿಯಾಗಿದೆ. ಸರ್ಕಾರಗಳು ಆ ಜವಾಬ್ದಾರಿ ಮರೆತಾಗ ಅದನ್ನು ನೆನಪಿಸುವುದು ಪ್ರಜ್ಞಾವಂತ ನಾಗರಿಕರು ಮತ್ತು ಜನಾಂದೋಲನಗಳ ನಿರಂತರ ಹೊಣೆಗಾರಿಕೆಯಾಗಿದೆ. ದೇಶದಲ್ಲಿ ಸಂವಿಧಾನ ಸಂರಕ್ಷಣೆಗೆ SDPI ಸದಾ ಸಿದ್ಧವಾಗಿದೆ.

ರಾಷ್ಟ್ರೀಯ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು! ಅಬ್ದುಲ್ ಮಜೀದ್‌ ರಾಜ್ಯಾಧ್ಯಕ್ಷರು

SDPIKarnataka #NationalConstitutionDay

Leave A Comment