27
Nov

ನವೆಂಬರ್ 25ರಂದು ಬೆಂಗಳೂರಿನ ಉರ್ದು ಹಾಲ್‌ನಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಕೆಳಗಿನ ಮೂರು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗಿದೆ:

ವೀರಪ್ಪ ಮೊಯ್ಲಿ ಅವರ ಗಂಭೀರ ಆರೋಪಕ್ಕೆ ಕಾಂಗ್ರೆಸ್‌ ಉತ್ತರಿಸಲಿ

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು 2002ರ ಗುಜರಾತ್ ಗಲಭೆ ತನಿಖೆಯನ್ನು ಕಾಂಗ್ರೆಸ್ ನಾಯಕರೇ ತಡೆಹಿಡಿದಿದ್ದರು ಎಂದು ಬಹಿರಂಗಪಡಿಸಿದ್ದಾರೆ. “ಆ ತನಿಖೆ ಮುಂದುವರಿದಿದ್ದರೆ ಮೋದಿ ಗಡಿಪಾರು ಆಗುತ್ತಿದ್ದರು. ಕಾಂಗ್ರೆಸ್‌ನೊಳಗಿನ ಕೆಲವು ನಾಯಕರೇ ತನಿಖೆ ನಡೆಯದಂತೆ ತಡೆದರು” ಎಂಬ ಅವರ ಹೇಳಿಕೆ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್‌ ಸ್ಲೀಪರ್ ಸೆಲ್‌ಗಳ ಪ್ರಭಾವವನ್ನು ಬಹಿರಂಗಪಡಿಸುತ್ತದೆ.

ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯವನ್ನು ನಿರಂತರವಾಗಿ ವಂಚಿಸುತ್ತಾ ಬಂದಿರುವುದಕ್ಕೆ ಇದು ಮತ್ತೊಂದು ಸಾಕ್ಷಿ. ಈ ಗಂಭೀರ ಆರೋಪಕ್ಕೆ ಕಾಂಗ್ರೆಸ್‌ ತಕ್ಷಣ ಸಾರ್ವಜನಿಕ ಸ್ಪಷ್ಟಿಕರಣ ನೀಡಬೇಕು. ಈ ವಿಷಯದಲ್ಲಿ SDPI ಹೋರಾಟ ಮುಂದುವರಿಸಲು ನಿರ್ಣಯಿಸಲಾಗಿದೆ.

SDPIKarnataka

Leave A Comment