15 Jan By admin feature, News, Politicsಎಸ್.ಡಿ.ಪಿ.ಐ ಮೈಸೂರು ಜಿಲ್ಲೆ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆ – 2023ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ವತಿಯಿಂದ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆಯನ್ನು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಚುನಾವಣಾ ತಂತ್ರ ಮತ್ತು ಬೂತ್ ಮಟ್ಟದಲ್ಲಿ ನಡೆಸಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.ಕ್ಷೇತ್ರದ ಅಭ್ಯರ್ಥಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅವರು ಸಮಾರೋಪ ಮಾತುಗಳನ್ನು ಆಡಿದರು. ಈ ಸಭೆಯಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷ ರಫತ್ ಉಲ್ಲಾ ಖಾನ್, ಜಿಲ್ಲಾ ಪಕ್ಷ ಸಂಘಟನಾ ಕಾರ್ಯದರ್ಶಿ ಆಕ್ರಂ, ಸಂಪನ್ಮೂಲ ವ್ಯಕ್ತಿಯಾಗಿ ಅಪ್ಸರ್ ಹುಣಸೂರು ಹಾಗೂ ಎಲ್ಲ ಬೂತ್ ಸಮಿತಿ ಉಸ್ತುವಾರಿಗಳು ಭಾಗವಹಿಸಿದ್ದರು.ಸೋಶಿಯಲ್ ಡೆಮಾಕ್ರಟಿಕ್ ಪಾಟಿ ಆಫ್ ಇಂಡಿಯಾ ಮೈಸೂರು Read More
14 Jan By admin feature, News, Politicsಈ ಹಬ್ಬ ನಾಡಿಗೆ ಶಾಂತಿ ಮತ್ತು ನೆಮ್ಮದಿ ಹೊತ್ತು ತರಲಿ. ರೈತರಿಗೆ ಸಮೃದ್ಧ ಮಳೆ ಬೆಳೆಯ ಮೂಲಕ ಹರ್ಷ ತುಂಬಲಿ ಎಂದು ಆಶಿಸುತ್ತ ನಾಡಿನ ಎಲ್ಲ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ.ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು~ಅಬ್ದುಲ್ ಮಜೀದ್ ಮೈಸೂರು,ರಾಜ್ಯಾಧ್ಯಕ್ಷರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ Read More
14 Jan By admin feature, News, Politicsಸಂತಾಪಬುದ್ಧ, ಅಂಬೇಡ್ಕರ್ ಅವರ ಬರಹ ಮತ್ತು ವಿಚಾರಗಳನ್ನು ಸಮಾಜದಲ್ಲಿ ಪಸರಿಸುತ್ತಾ ಜಾಗೃತಿ ಮೂಡಿಸುತ್ತಿದ್ದ ಹೂಡಿ ವೆಂಕಟೇಶ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಕಾರ್ಯ ನಮಗೆಲ್ಲರಿಗೂ ಸ್ಪೂರ್ತಿದಾಯಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸುತ್ತೇನೆ.~ಬಿ.ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ Read More
14 Jan By admin feature, News, Politicsಸಾಮಾಜಿಕ ಬದ್ಧತೆಯನ್ನು ಬದುಕಿನ ಭಾಗವಾಗಿಸಿಕೊಂಡು ಬುದ್ಧ, ಅಂಬೇಡ್ಕರ್ ತೋರಿದ ಮಾರ್ಗವನ್ನು ಜನರಿಗೆ ಪರಿಚಯಿಸುತ್ತಿದ್ದ ಹೂಡಿ ವೆಂಕಟೇಶ್ ಅವರು ನಿಧನರಾಗಿದ್ದಾರೆ. ಅವರ ಈ ಅಕಾಲಿಕ ಮರಣಕ್ಕೆ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.~ಅಫ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ Read More
14 Jan By admin feature, News, Politicsಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೋರಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆ ಸಮುದಾಯದ ಮಠಾಧೀಶರಾದ ಜಯಮೃತ್ಯುಂಜಯ ಸ್ವಾಮಿಯವರು ಮುಸ್ಲಿಮರನ್ನು ಎಲ್ಲಿಂದಲೋ ಬಂದವರು ಎಂದು ಹೇಳಿ ಅವಹೇಳನ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಹೇಳಿಕೆ.ಅವರು ಈ ಹೇಳಿಕೆಯ ವಿಚಾರವಾಗಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದ ಅಭ್ಯರ್ಥಿಗಳು ಎಲ್ಲೆಲ್ಲ ಸ್ಪರ್ಧೆ ಮಾಡುತ್ತಾರೋ ಅಲ್ಲೆಲ್ಲ ಮುಸ್ಲಿಂ ಸಮುದಾಯ ಅವರ ವಿರುದ್ಧ ಮತ ನೀಡಲಿದೆ.ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ Read More
12 Jan By admin feature, News, Politicsವೈಯಕ್ತಿಕ ಜಗಳವನ್ನು ಕೋಮು ಗಲಭೆಯಾಗಿ ಪರಿವರ್ತಿಸಿ ಅದರಿಂದ ರಾಜಕೀಯ ಲಾಭ ಪಡೆಯಲು ಸಾಗರದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನಡೆಸಿದ ಪ್ರಯತ್ನವನ್ನು ಎಸ್ಡಿಪಿಐ ಪಕ್ಷ ಖಂಡಿಸುತ್ತದೆ. ಅದರ ಭಾಗವಾಗಿ ಬಲವಂತವಾಗಿ ಬಂದ್ ಮಾಡಿಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕು.ದೇವೇಂದ್ರ ಪಾಟೀಲ್ಜಿಲ್ಲಾ ಉಪಾಧ್ಯಕ್ಷರು,ಎಸ್ಡಿಪಿಐ – ಶಿವಮೊಗ್ಗ Read More
12 Jan By admin feature, News, Politicsಕರ್ನಾಟಕ ವಿಧಾನಸಭಾ ಚುನಾವಣೆ – 2023ಹಾಸನ ಜಿಲ್ಲಾ ಚುನಾವಣಾ ಪೂರ್ವಭಾವಿ ಸಭೆರಾಜ್ಯ ಚುನಾವಣಾ ಉಸ್ತುವಾರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರ ನೇತೃತ್ವದಲ್ಲಿ ಹಾಸನ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಫ್ಸರ್ ಕೊಡ್ಲಿಪೇಟೆ ಅವರು ಈ ಕೆಳಗಿನ ಪ್ರಶ್ನೆಗಳನ್ನು ಸಭೆಯ ಮುಂದಿಟ್ಟು ಚರ್ಚೆ ನಡೆಸಿದರು.2023 ಹಾಸನ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ರೇಸ್ ನಲ್ಲಿ ಒಬ್ಬೇ ಒಬ್ಬ ಅಲ್ಪಸಂಖ್ಯಾತ ಅಥವಾ ದಲಿತ ಅಭ್ಯರ್ಥಿಯ ಹೆಸರಿದೆಯೇ? ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಬಂದ ನಂತರ ಅಲ್ಪಸಂಖ್ಯಾತರು ಕೇವಲ ಓಟ್ ಬ್ಯಾಂಕ್ ಆಗಿ ಮಾತ್ರ ಬಳಕೆಯಾಗಿರುವುದು ನಿಜವಲ್ಲವೇ? ಸ್ವಾಭಿಮಾನದ ರಾಜಕಾರಣಕ್ಕಾಗಿ ಎಸ್.ಡಿ.ಪಿ.ಐ ಪಕ್ಷ ಈ ಬಾರಿ ಒಬ್ಬ ಅಲ್ಪಸಂಖ್ಯಾತ ಅಥವಾ ದಲಿತ ಸಮುದಾಯದ ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ ಇದು ಸರಿಯೇ? ಹಾಗೇನಾದರೂ ಆದಲ್ಲಿ ಈ ಬಾರಿ ಹಾಸನ ಕ್ಷೇತ್ರದಲ್ಲಿ ಸಕಾರಾತ್ಮಕ ರಾಜಕಾರಣದ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆಯೇ? ಅಲ್ಪಸಂಖ್ಯಾತ, ದಲಿತ ಮತದಾರರು ಎಚ್ಚರಗೊಳ್ಳುವರೇ? Read More
12 Jan By admin feature, KannadaPressReleases, Politicsವಿಧಾನಸಭಾ ಸಾರ್ವತ್ರಿಕ ಚುನಾವಣೆ – 2023ವಿಧಾನಸಭಾ ಕ್ಷೇತ್ರ ಚುನಾವಣಾ ನಿರೀಕ್ಷಣಾ ಸಮಿತಿಯೊಂದಿಗೆ ಚುನಾವಣೆಯ ಕಾರ್ಯಯೋಜನೆಯನ್ನು ರೂಪಿಸುವ ಸಭೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಭಾಗವಹಿಸಲಿದ್ದಾರೆ.ವೇಳಾಪಟ್ಟಿ Read More
11 Jan By admin feature, News, Politicsಬಿಜೆಪಿಗೆ ಚುನಾವಣೆ ಸೋಲಿನ ಭೀತಿ• ಕೋಮು ದ್ವೇಷವನ್ನೇ ಉಸಿರಾಡುವ ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದೆ.• ‘ಸಂಘಪರಿವಾರದ ಕಾರ್ಯಕರ್ತನ ಕೊಲೆ ಯತ್ನ’ ಎಂಬ ಗುಲ್ಲೆಬ್ಬಿಸಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.ವೈಯಕ್ತಿಕ ಗಲಾಟೆಗಳಿಗೂ ಕೋಮು ಸಂಘರ್ಷದ ಬಣ್ಣ ಹಚ್ಚಲು ಹವಣಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ನೀಚತನಕ್ಕೆ ಸಾಗರದ ಘಟನೆಯೇ ಸಾಕ್ಷಿ.~ಅಬ್ದುಲ್ ಲತೀಫ್ ಪುತ್ತೂರು,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ Read More
11 Jan By admin feature, News, Politicsಬೆಳಗಾವಿ ಪೋಲಿಸ್ ನಿರೀಕ್ಷಕರೇ,, ಫಾತಿಮಾ ಮಸೀದಿ ವಿಚಾರವನ್ನು ಮುಂದಿಟ್ಟುಕೊಂಡು ಕೋಮು ವೈಷಮ್ಯವನ್ನು ಹರಡುತ್ತಿರುವ ಸಂಘಪರಿವಾರದ ನಾಯಕರನ್ನು ತಹಬದಿಗೆ ತನ್ನಿ. ಕಾನೂನು ಬಾಹಿರ ಮಸೀದಿಯೋ ಅಲ್ಲವೋ ಎಂದು ನಿರ್ಧರಿಸಲು ಮುತಾಲಿಕ್ ಗೆ ಅಧಿಕಾರ ಕೊಟ್ಟವರು ಯಾರು?~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ Read More