03
Jan
02
Jan
02
Jan
02
Jan

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ರಾಜ್ಯ ಹೋಶಾಧಿಕಾರಿ ನೇತ್ರತ್ವದಲ್ಲಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಾಗೂ ಪದಗ್ರಹಣ ಸಮಾರಂಭ ಜಿಲ್ಲಾ ಉಸ್ತುವಾರಿ ಹಾಗೂ ಪಕ್ಷದ ರಾಜ್ಯ ಕೋಶಾಧಿಕಾರಿ ಸೈಯದ್‌ ಇಸಹಾಖ ಹುಸೇನ್‌ (ಖಾಲಿದ್) ಅವರ ನೇತ್ರತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕವಿತಾಳ ಪಟ್ಟಣದ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮೊಹಮ್ಮದ್ ಫಯಾಜ್ ಹಾಗೂ ಉಪಾಧ್ಯಕರಾಗಿ ಚಾಂದ್ ಪಾಷಾ, ಕಾರ್ಯದರ್ಶಿಯಾಗಿ ಮುಸ್ತಫಾ, ಸಹಕಾರ್ಯದರ್ಶಿಯಾಗಿ ರಸೂಲ್, ಕೋಶಾಧಿಕಾರಿಯಾಗಿ ಮೊಹಮ್ಮದ್ ಅಮೀರ್ ಅಯ್ಕೆಯಾದರು.
ಈ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಯುವಕರು ಮತ್ತು ಹಿರಿಯರು ಎಸ್‌ಡಿಪಿಐ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಕ್ಷದ ರಾಜ್ಯ ಕೋಶಾಧಿಕಾರಿ ಸೈಯದ್‌ ಇಸಹಾಖ ಹುಸೇನ್ (ಖಾಲಿದ್ ಅವರು ಮಾತನಾಡಿ, ಪಕ್ಷದ ಅಗತ್ಯತೆ ಮತ್ತು ತತ್ವ ಸಿದ್ಧಾಂತಗಳ ಬಗ್ಗೆ ವಿವರಿಸಿದರು. ಇನ್ನೋರ್ವ ಅತಿಥಿ ಜಿಲ್ಲಾ ಸಮಿತಿ ಸದಸ್ಯರೂ ಆದ ಮೀರ್ ಅಲಿ ಅವರು ಪಕ್ಷದ ನಿಲುವಿನ ಕುರಿತು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ತಾಲೂಕು ಸಂಘಟನಾ ಕಾರ್ಯದರ್ಶಿಯಾದ ಜಿಲಾನಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮೀರ ಅಲಿ ಅವರು ನೆರವೇರಿಸಿದರು.

01
Jan
31
Dec

ಪಿಲಿಯಾಪಟ್ಟಣದಲ್ಲಿರುವ ಸೆಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ- ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ರವರ ನೇತೃತ್ವದಲ್ಲಿ ಎಸ್.ಡಿ.ಪಿ.ಐ. ನಿಯೋಗ ಸ್ಥಳಕ್ಕೆ ಭೇಟಿ ಪಿರಿಯಾಪಟ್ಟಣ ನಗರದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೆಂಟ್ ಮ್ಯಾರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು

29
Dec
29
Dec
29
Dec

ರಾಜ್ಯದ ಮುಖ್ಯಮಂತ್ರಿ ಪದವಿ ನೀಡಿ ಗೌರವಿಸಿಬೇಕಾಗಿದ್ದ ಧೀಮಂತ ನಾಯಕ ಅಝೀಜ್ ಸೇಠ್ ನಮನ್ನಗಲಿ 21 ವರ್ಷ.
ಈ ದಿನ ಕರ್ನಾಟಕ ರಾಜ್ಯದ ಜನಪ್ರಿಯ ರಾಜಕೀಯ ನಾಯಕ ದಿವಂಗತ ಮಾನ್ಯ ಅಝೀಜ್ ಸೇಠ್ ರ 21ನೇ ಪುಣ್ಯ ಸ್ಮರಣೆಯ ದಿನ.
ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಧೀಮಂತ ನಾಯಕ. ಬೀಡಿ ಕಾರ್ಮಿಕರನ್ನು ಸಂಘಟಿಸಿ ಹಂತ ಹಂತವಾಗಿ ರಾಜ್ಯ ನಾಯಕರಾಗಿ ಬೆಳೆದ ಸೇಠ್ ಸಾಹೇಬ್ 1960 ರಿಂದ 1966 ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿ, 1967 ರಿಂದ 2001 ರ ನಡುವೆ 6 ಭಾರಿ ಶಾಸಕರು, 1972 ರಿಂದ 1984 ರ 12 ವರ್ಷ ಗಳ ಅವಧಿಯಲ್ಲಿ ಸಾರಿಗೆ, ಪ್ರವಾಸೋದ್ಯಮ, ಕಾರ್ಮಿಕ, ವಖ್ಫ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
1984 ರಿಂದ 1989 ರ ವರೆಗೆ ಧಾರವಾಡ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಸಲ್ಲಿಸಿದ ಸೇವೆ ಅಲ್ಲಾಹು ಸ್ವೀಕರಿಸಲಿ ಅವರ ಪರಲೋಕ ಜೀವನ ಅಲ್ಲಾಹು ಪಾವನಗೊಳಿಸಲಿ.
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ