31
Oct
29
Oct

ವಿಧಾನಸಭಾ ಚುನಾವಣೆ 2023 – ಕ್ಷೇತ್ರ ಸಮೀಕ್ಷೆ ನಡೆಸಿದ SDPI ರಾಷ್ಟ್ರೀಯ ಪ್ರಧಾನ
ರಾಯಚೂರು ಅ 27: ರಾಯಚೂರು ಜಿಲ್ಲೆಗೆ ಭೇಟಿ ನೀಡಿ ಕ್ಷೇತ್ರ ಸಮೀಕ್ಷೆ ನಡೆಸಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಹಾಗೂ ರಾಜ್ಯ ಸಮಿತಿ ಸದಸ್ಯ ನೂರುದ್ದೀನ್ ಮೌಲಾನ ರವರನ್ನೊಳಗೊಂಡ ತಂಡ ಆ ಬಳಿಕ ನಗರದ ಸ್ವಾಗತ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಒಳಾಂಗಣ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಭ್ರಷ್ಟ ರಾಜಕಾರಣಿಗಳಿಂದ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಪ್ರಮುಖ ಸಮಸ್ಯೆಗಳು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದು ನೈಜ ಜಾತ್ಯತೀತತೆಯೊಂದಿಗೆ ಪರ್ಯಾಯ ರಾಜಕಾರಣ ಅಗತ್ಯವಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಎಸ್‌ಡಿಪಿಐ ಯನ್ನು ಗೆಲ್ಲಿಸಬೇಕಾಗಿದೆ ಎಂದು ಇಲ್ಯಾಸ್ ಮಹಮ್ಮದ್ ತುಂಬೆ ಯವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತೌಸೀಫ್ ಅಹಮದ್, ಪ್ರಧಾನ ಕಾರ್ಯದರ್ಶಿ ಜಿಲಾನಿ ಪಾಷಾ, ಜಿಲ್ಲಾ ಸಮಿತಿ ಸದಸ್ಯರು ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

29
Oct

ಅಪ್ಪು ನೆನಪು
ಅಕ್ಟೋಬರ್ 29
ಇಂದಿಗೆ ಪುನೀತ್ ರಾಜ್ ಕುಮಾರ್ ಅವರು ಅಗಲಿ ಒಂದು ವರ್ಷವೇ ಕಳೆಯಿತು.
ಅಪ್ಪು ಒಬ್ಬ ಸಿನಿಮಾ ನಟನ ಆಚೆಗೆ ಒಬ್ಬ ವ್ಯಕ್ತಿಯಾಗಿ, ಮಾತು ಕೃತಿಯಲ್ಲಿ ಯಾರನ್ನು ನೋಯಿಸದೆ, ಯಾರನ್ನು ದ್ವೇಷಿಸದೆ, ಜಾತಿ ಧರ್ಮ ಎಂದು ಮಾತನಾಡದೆ, ಭೇದಭಾವ ತೋರದೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ದಾನ ಮಾಡಿದ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡ ಎಲ್ಲೋ ಅದರ ಹಮ್ಮು ಬಿಮ್ಮು ತೋರಿಸದ ವ್ಯಕ್ತಿಯಾಗಿ ಎಲ್ಲರಿಗೂ ಮಾದರಿಯಾಗಿ ಜಾತಿ ಧರ್ಮಗಳ ಆಚೆಗೆ, ಬಡತನ ಶ್ರೀಮಂತಿಕೆ ಆಚೆಗೆ ಬದುಕಿ ಹೋಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರಂತಹ ವ್ಯಕ್ತಿತ್ವವನ್ನು ಪಡೆದ ನಮ್ಮ ರಾಜ್ಯದಲ್ಲಿ ಜನ ಇನ್ನೂ ದ್ವೇಷ, ಹಗೆ, ಜಾತಿ, ಧರ್ಮ ಎಂದು ದಿನಬೆಳಗಾದರೆ ಅದರಲ್ಲೇ ಮಿಂದೇಳುತ್ತಿರುವುದು ಬೇಸರದ ಸಂಗತಿಯಾಗಿದೆ.
~ ಅಬ್ದುಲ್ ಮಜೀದ್ ಮೈಸೂರು,
ರಾಜ್ಯಾಧ್ಯಕ್ಷರು, ಎಸ್ ಡಿ ಪಿ ಐ ಕರ್ನಾಟಕ

29
Oct
29
Oct
29
Oct
28
Oct

ಪಂಚ ದ್ರಾವಿಡ ಭಾಷೆಗಳಾದ ಮತ್ತು ಕನ್ನಡದ ಸಹೋದರ ಭಾಷೆಗಳಾದ ಕೊಡವ, ತುಳುವನ್ನು ಕಡೆಗಣಿಸಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ’ ವಿಧೇಯಕದಲ್ಲಿ ಕೈಬಿಟ್ಟು ಇಂಗ್ಲಿಷ್‌ಗೆ ಅವಕಾಶ ನೀಡಿರುವುದು ಪ್ರಾದೇಶಿಕ ಅಲ್ಪಸಂಖ್ಯಾತ ಭಾಷೆಗಳ ನಿರ್ಲಕ್ಷ್ಯ ನೀತಿ

ಪಂಚ ದ್ರಾವಿಡ ಭಾಷೆಗಳಾದ ಮತ್ತು ಕನ್ನಡದ ಸಹೋದರ ಭಾಷೆಗಳಾದ ಕೊಡವ, ತುಳುವನ್ನು ಕಡೆಗಣಿಸಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ’ ವಿಧೇಯಕದಲ್ಲಿ ಕೈಬಿಟ್ಟು ಇಂಗ್ಲಿಷ್‌ಗೆ ಅವಕಾಶ ನೀಡಿರುವುದು ಪ್ರಾದೇಶಿಕ ಅಲ್ಪಸಂಖ್ಯಾತ ಭಾಷೆಗಳ ನಿರ್ಲಕ್ಷ್ಯ ನೀತಿ ಮತ್ತು

27
Oct