11
Dec

ಒಳ ಮೀಸಲಾತಿ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಗೊಳಿಸಲು SDPI ಆಗ್ರಹ
ಬೆಂಗಳೂರು ಡಿಸೆಂಬರ್ -11;
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಹೋರಾಟ ಗಾರರನ್ನು ಬಂಧಿಸಿದ ಬಿಜೆಪಿ ಸರಕಾರದ ಕ್ರಮ ಸಂವಿಧಾನಕ್ಕೆ ಎಸಗುವ ಅಪಚಾರವಾಗಿದೆ. ಹೋರಾಟಗಾರರ ಬೇಡಿಕೆಗೆ ಸ್ಪಂದಿಸಿ, ನ್ಯಾಯ ಕೊಡುವುದು ಬಿಟ್ಟು ಸರಕಾರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಇಳಿದಿರುವುದು ಖಂಡನಾರ್ಹ. ಮಾತ್ರವಲ್ಲ 62 ವರ್ಷ ಪ್ರಾಯದ ಹೋರಾಟಗಾರರೊಬ್ಬರ ತಲೆಗೆ ಪೊಲೀಸರು ಹಲ್ಲೆ ನಡೆಸಿ ಗಾಯಗೊಳಿಸಿರುವ ಕೃತ್ಯ ಪೊಲೀಸ್ ಇಲಾಖೆಯ ಮೂಲಕ ಸರಕಾರ ನಡೆಸುತ್ತಿರುವ ದರ್ಪವಾಗಿದೆ. ಸರಕಾರ ಕೂಡಲೇ ಹೋರಾಟಗಾರರ ಬೇಡಿಕೆಯನ್ನು ಪರಿಗಣಿಸಬೇಕು ಮತ್ತು ಈ ಕೂಡಲೇ ಬಂಧಿಸಿರುವವರನ್ನು ಬಿಡುಗಡೆಗೊಳಿಸ ಬೇಕೆಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

12
Nov
16
Oct
13
Oct

ಎಸ್ಡಿಪಿಐ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳು

ದಿನಾಂಕ 11 ಅಕ್ಟೋಬರ್ 2022 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಅಕ್ಟೋಬರ್ 11, 2022 ರಂದು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಮೀಸಲಾತಿ, ನಿರುದ್ಯೋಗ, ಚುನಾವಣಾ ತಯಾರಿಗಳ