08
Jun

ನವದೆಹಲಿ, ಡಿಸೆಂಬರ್ 17, 2020: ಶಾಸಕಾಂಗವು ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭ ಮತ್ತು ಸಂಸತ್ತನ್ನು ಪ್ರಜಾಪ್ರಭುತ್ವದ ಗರ್ಭಗುಡಿ ಎಂದು ಕರೆಯಲಾಗುತ್ತದೆ. ಸಂಸತ್ತಿನಲ್ಲಿಯೇ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಾಗುತ್ತದೆ ಮತ್ತು ರಾಷ್ಟ್ರದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಸಂಸತ್ತಿನ ಅಧಿವೇಶನಗಳನ್ನು ಈ ಉದ್ದೇಶಕ್ಕಾಗಿ ಕರೆಯಲಾಗುತ್ತದೆ.ಪ್ರಜಾಪ್ರಭುತ್ವ ಅಥವಾ ನೈತಿಕತೆಯ ಬಗ್ಗೆ ನಿರ್ಲಕ್ಷ್ಯಭಾವ ಹೊಂದಿರುವ ಆಡಳಿತ ಪಕ್ಷವಾಗಿರುವ ಬಿಜೆಪಿ, ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಮುಂದೂಡಲು ನಿರ್ಧರಿಸುವ ಮೂಲಕ ದೇಶದ ಪ್ರಜಾಪ್ರಭುತ್ವದ ಉಸಿರುಗಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಟೀಕಿಸಿದ್ದಾರೆ.ರಾಜಧಾನಿಯಲ್ಲಿ ರೈತರ ನಿರಂತರ ಮುಷ್ಕರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದ್ದು, ಸಂಸತ್ತಿನಲ್ಲಿ ಎತ್ತಿರುವ ರೈತರ ಸಮಸ್ಯೆಗಳನ್ನು ಚರ್ಚಿಸಲಾಗದೆ ಮತ್ತು ಎದರಿಸಲಾಗದೆ ಅದರಿಂದ ಸರ್ಕಾರ ದೂರ ಓಡಿ ಹೋಗಿದೆ ಎಂದು ಫೈಝಿ ಆರೋಪಿಸಿದ್ದಾರೆ.ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಚುನಾವಣೆಗಳು ಮತ್ತು ಸಂಬಂಧಿತ ಪ್ರಚಾರಗಳನ್ನು ಕೈಬಿಟ್ಟಿಲ್ಲ ಅಥವಾ ಅದರ ಮೇಲೆ ನಿರ್ಬಂಧ ಹೇರಲಾಗಿಲ್ಲ. ಆದರೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಮುಂದೂಡಲು ಕೊರೊನಾ ಸಾಂಕ್ರಾಮಿಕ ರೋಗದ ಕಾರಣವನ್ನು ತೋರಿಸುವುದು ಜನರನ್ನು ಮರುಳು ಮಾಡುವ ಹಾಸ್ಯಾಸ್ಪದ ತಂತ್ರವಲ್ಲದೆ ಮತ್ತೇನೂ ಅಲ್ಲ ಎಂದು ಫೈಝಿ ಹೇಳಿದ್ದಾರೆ.ದೇಶದಲ್ಲಿ ಸಂಘ ಪರಿವಾರ ಫ್ಯಾಸಿಸ್ಟ್ ಆಡಳಿತವನ್ನು ಸೋಲಿಸಲು ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದು ಫೈಝಿ ಹೇಳಿದ್ದಾರೆ.

Leave A Comment