ಬೆಂಗಳೂರು ಜೂನ್ 20: ಇಲ್ಲಿನ ಸಮೀಪ ಕೊಡವೂರು ಎಂಬಲ್ಲಿನ ಕಲ್ಮತ್ ಮಸೀದಿಯ ಜಾಗವನ್ನು ಕಂದಾಯ ಇಲಾಖೆ ವಶಪಡಿಸಿ ಕೊಂಡಿದೆ. ಹಲವಾರು ವರ್ಷಗಳಿಂದ ಮಸೀದಿಯ ವಶದಲ್ಲಿದ್ದ ಈ ಆಸ್ತಿ ವಕ್ಫ್ ಇಲಾಖೆಯಲ್ಲಿ ನೋಂದಾವಣೆ ಗೊಂಡಿದ್ದವು.
ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಮತ್ತು ಕಂದಾಯ ಸಚಿವ ಆರ್ ಅಶೋಕ್ ಕೆಲವು ಕೋಮುವಾದಿಗಳ ಕುಮ್ಮಕ್ಕಿನಿಂದ ಅಧಿಕಾರಿಗಳು ಮಸೀದಿಯ ಜಾಗವನ್ನು ಅಸಾಂವಿಧಾನಿಕವಾಗಿ ವಶಪಡಿಸಿಕೊಂಡಿದ್ದಾರೆ. ಶಾಂತಿ ಸೌಹಾರ್ದತೆ ಹೆಸರುವಾಸಿಯಾಗಿದ್ದ ಉಡುಪಿಯಲ್ಲಿ ಕೋಮು ಸೌಹಾರ್ದತೆಗೆ ಅಡ್ಡಿಯಾಗುತ್ತಿರುವ ಭಾವನಾತ್ಮಕ ವಿಷಯವನ್ನು ಕದಡಲಾಗಿದೆ.
ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಬಗ್ಗದೆ ಕಾನೂನು ಪ್ರಕಾರ ಜಾಗವನ್ನು ಮರಳಿ ಮಸೀದಿಯ ಹೆಸರಿಗೆ ವಾಪಸ್ ನೊಂದಾಯಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಾಧ್ಯಮ ಉಸ್ತುವಾರಿ ಅಕ್ರಮ್ ಹಸನ್ ಆಗ್ರಹಿಸಿದ್ದಾರೆ.

Leave A Comment