27
Nov

ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಸಂತ, ದಾರ್ಶನಿಕ, ಸಮಾಜ ಸುಧಾರಕ ಶ್ರೀ ಕನಕದಾಸರ ಜಯ೦ತಿಯ ಶುಭಾಶಯಗಳು.

16ನೇ ಶತಮಾನದಲ್ಲೇ ತಳಸಮುದಾಯಗಳ ಧ್ವನಿಯಾಗಿ, ಮೇಲು-ಕೀಳು ಎಂಬ ತಾರತಮ್ಯವನ್ನು ಖಂಡಿಸಿ, ಭಕ್ತಿ ಮತ್ತು ಜ್ಞಾನದ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಕನಕದಾಸರ ಬದುಕು ಮತ್ತು ಬರಹಗಳು ಇಂದಿಗೂ ಪ್ರಸ್ತುತ. ಅವರ ಸಾಮಾಜಿಕ ನ್ಯಾಯ, ಭ್ರಾತೃತ್ವ ಮತ್ತು ಮಾನವೀಯ ಮೌಲ್ಯಗಳು ನಮ್ಮ ನಾಡಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿಗೊಳಿಸಲೆ ಎಂದು ಆಶಿಸುತ್ತೇನೆ.

~ಅಬ್ದುಲ್ ಮಜೀದ್‌,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

SDPIKarnataka #KanakadasaJayanthi

Leave A Comment