03
Dec
30
Nov

ಮಜ್ಲಿಸೇ-ಇಸ್ಲಾಹಿ- ವ- ತಂಝೀಮ್ ಭಟ್ಕಳ ಕಚೇರಿಗೆ
ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರ ಭೇಟಿ
ಉಡುಪಿ, ಉತ್ತರ ಕನ್ನಡ ಪ್ರವಾಸದಲ್ಲಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು ನೂರು ವರ್ಷಗಳ ಇತಿಹಾಸ ಇರುವ ಭಟ್ಕಳದ ಮಜ್ಲಿಸೇ-ಇಸ್ಲಾಹಿ- ವ- ತಂಝೀಮ್ ಕಚೇರಿಗೆ ಭೇಟಿ ನೀಡಿ ಅದರ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಪ್ರಸಕ್ತ ದೇಶದ ಸನ್ನಿವೇಶದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಜವಾಬ್ದಾರಿಗಳ ಬಗ್ಗೆ ಹಾಗೂ ಮುಂಬರುವ ಚುನಾವಣೆಯಲ್ಲಿ ಪಕ್ಷದ ನಡೆಯ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ತೌಫೀಕ್ ಬ್ಯಾರಿ, ತಂಝೀಮ್ ಅಧ್ಯಕ್ಷರಾದ ಇನಾಯತುಲ್ಲಾ ಶಾಬಂದ್ರಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಜೆ ರಖೀಬ್‌ ಹಾಗೂ ಪದಾಧಿಕಾರಿಗಳು ಹಾಜರಿದ್ದರು.