06
Oct

ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ: ರಾಜ್ಯ ಸರ್ಕಾರದ ನಡೆಗೆ ಎಸ್ ಡಿಪಿಐ ವಿರೋಧ
ಉದ್ಯೋಗ ಖಾತ್ರಿ, ವಿವಿಧ ವಸತಿ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ನಿಧಿ,ತೆರಿಗೆ, ಖರ್ಚು-ವೆಚ್ಚಗಳ ಎಲ್ಲ ಚೆಕ್‌ಗಳಿಗೂ ಖಡ್ಡಾಯವಾಗಿದ್ದ PDO ಹಾಗೂ ಪಂಚಾಯ್ತಿ ಅಧ್ಯಕ್ಷರ ಜಂಟಿ ಸಹಿಯ ಅಧಿಕಾರದಿಂದ ಚುನಾಯಿತ ಅಧ್ಯಕ್ಷರನ್ನು ಹೊರಗಿಡುವ ಸರ್ಕಾರದ ನಿರ್ಧಾರ ಚುನಾಯಿತ ಪ್ರತಿನಿಧಿಗಳ ಅಧಿಕಾರಮೊಟಕು ಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.
ಪಂಚಾಯತ್ ರಾಜ್ ಕಾಯ್ದೆಯ 64 ರಿಂದ 70ರ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ #ಬಿಜೆಪಿ ಸರ್ಕಾರವು ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಹೊರಗಿಡಲು ನಿರ್ಧರಿಸಿ ರಾಜ್ಯದಲ್ಲಿ 5,963 ಗ್ರಾಮ ಪಂಚಾಯಿತಿಗಳ 91,437 ಗ್ರಾಮ ಪಂಚಾಯಿತಿ ಸದಸ್ಯರ ಮತ್ತು ಗ್ರಾಮ ಸಭೆಗಳ ಅಧಿಕಾರವನ್ನು ಕಿತ್ತುಕೊಂಡಂತ್ತಾಗಿದೆ.
~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI

02
Oct
02
Oct
30
Sep