31
Jul

ಮೈಸೂರು ನಗರದಲ್ಲಿ ದಿನದಿಂದ ದಿನಕ್ಕೆ ಕರೋನಾ ಮಾಹಮಾರಿಯ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ಮರಣದ ಪ್ರಮಾಣವು ಸಹ ರಾಜ್ಯದ ಸರಾಸರಿಗಿಂತ ಮೈಸೂರಿನಲ್ಲಿ ದುಪ್ಪಟ್ಟು ಪ್ರಮಾಣದಲ್ಲಿದೆ. ಇದನ್ನು ತಡೆಯುವ ಸಲುವಾಗಿ ಹಾಗೂ ಜನರಲ್ಲಿ ಕರೋನಾ ಬಗ್ಗೆ ಇರುವ ಭಯ ಹೋಗಲಾಡಿಸಿ ಅವರಲ್ಲಿ ಆತ್ಮಸ್ತೈರ್ಯ ತುಂಬುವ ಸಲುವಾಗಿ ಕರೋನಾ ಬಗ್ಗೆ ಭಯ ಬೇಡ ಜಾಗೃತಿ ಇರಲಿ ಎಂಬ ಘೋಷ್ಯ ವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಸಂಜೆ ಮೈಸೂರು ನಗರದಲ್ಲಿರುವ ಶಾಂತಿ ನಗರದ ಮದನಿ ಮಸೀದಿ ಮುಂಭಾಗ ಅಭಿಯಾನಕ್ಕೆ ಎಸ್.ಡಿ.ಪಿ.ಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಮಜೀದ್ ರವರು ಚಾಲನೆ ನೀಡಿ ಮಾತನಾಡುತ್ತ ಇಡೀ ವಿಶ್ವದಲ್ಲಿ ಕರೋನಾ ರೋಗದಿಂದ ಜನತೆ ತತ್ತರಿಸಿದ್ದು, ಪ್ರಸ್ತುತ ಭಾರತದಲ್ಲೂ ಸಹ ಕರೋನಾ ಪಾಸಿಟಿವ್ ಪ್ರಕರಣಗಳು ಮೀತಿ ಮೀರುತ್ತಿದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು, ಸಾವಿನ ಸಂಖ್ಯೆ ಗಮನಿಸಿದರೆ ರಾಜ್ಯದ ಸರಾಸರಿ ಮೀರಿ ಮೈಸೂರಿನಲ್ಲಿ ಅತಿ ಹೆಚ್ಚಾಗಿ ಸಾವು ಸಂಭವಿಸುತ್ತಿದೆ. ಈ ಗಂಭೀರತೆಯನ್ನು ಮನಗಂಡ ಎಸ್.ಡಿ.ಪಿ.ಐ ಪಕ್ಷ ಈಗಾಗಲೇ ಕರೋನಾದಿಂದ ಮೈಸೂರಿನಲ್ಲಿ ಅತಿ ಹೆಚ್ಚು ಸಾವು ಸಂಭವಿಸುತ್ತಿದೆ ಎಂಬ ಸತ್ಯಾಸತ್ಯತೆಯನ್ನು ಮನಗಂಡು ಇದರ ಹಿಂದಿನ ಕಾರಣಗಳನ್ನು ತಿಳಿಯುವ ನಿಟ್ಟಿನಲ್ಲಿ ಹಾಗೂ ಇದಕ್ಕೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ವೈದ್ಯದಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ಮಾಡಲಾಗಿದೆ. ಯಾವುದೇ ಲೋಪದೋಷಗಳು ಇಲ್ಲದೆ ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸ ಬೇಕು ಎಂದು ಆಗ್ರಹಿಸಲಾಗಿದೆ. ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡ ಬೇಕು ಯಾವುದೇ ಅಜಾಗೂರತೆ ಮಾಡ ಬಾರದು ಎಂದು ಜಿಲ್ಲಾ ಆರೋಗ್ಯಧಿಕಾರಿಗಳನ್ನು ಜನತೆಯ ಪರವಾಗಿ ಆಗ್ರಹಿಸಿಲಾಗಿದೆ ಹಾಗೂ ಅವರುಗಳು ಸಹ ಈ ನಿಟ್ಟಿನಲ್ಲಿ ಸೂಕ್ತವಾಗಿ ಸ್ಪಂದಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.ಹಾಗೆಯೇ ಈಗಾಗಲೇ ಕೊರೋನ ಸಾವುಗಳು ಆಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂಬುದಾಗಿ ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದು ಅಬ್ದುಲ್ ಮಜೀದ್ ರವರು ತಿಳಿಸಿದರು. ಈ ಜಾಗೃತಿ ಅಭಿಯಾನದ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮೌಲಾನಾ ಕಲೀಮ್ ಉಲ್ಲಾ, ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಅಮ್ಜದ್ ಖಾನ್, ಪಿ.ಎಫ್.ಐ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಫೀ ಉಲ್ಲಾ, ಜಿಲ್ಲಾ ಕಾರ್ಯದರ್ಶಿಯಾದ ಸುಲೇಮಾನ್, ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಮುಖಂಡರಾದ ಮೊಹಮ್ಮದ್ ಜಕಾಉಲ್ಲಾ,ರಫತ್ ಖಾನ್,ಹಾಜಿ ನಸ್ರುಲ್ಲಾ,ಮೌಲಾನಾ ನೂರುದ್ದೀನ್, ಮೌಲಾನಾ ಅಕ್ಮಲ್, ಹಾಫೀಜ್ ಮುಬಾರಕ್ ಹಾಗೂ ಇನ್ನಿತರೆ ಅನೇಕ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Leave A Comment