18
Oct

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಬಲವಂತವಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಸರ್ಕಾರದ ದುರಾಡಳಿತವನ್ನು ಖಂಡಿಸಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರದ್ಯಾಂತ “ಜಾಗೋ ಕಿಸಾನ್” ಎಂಬ ಶೀರ್ಷಿಕೆಯಡಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಅಭಿಯಾನ ನಡೆಸುವ ಕುರಿತು ಇಂದು ಮಂಡ್ಯ ಜಿಲ್ಲೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ SDPI ರಾಜ್ಯಾಧ್ಯಕ್ಷರಾದ ಇಲ್ಯಜ್ ಮಹಮ್ಮದ್ ತುಂಬೆ, ಅಭಿಯಾನದ ರಾಜ್ಯ ಸಂಚಾಲಕರಾದ ಅಬ್ರಾರ್ ಆಹಮದ್, ರೈತ ಹೋರಾಟಗಾರರದ ನಾಗಣ್ಣ ಗೌಡ, ಶಂಬೂನ ಹಳ್ಳಿ ಸುರೇಶ್, ಇಂಡುವಾಳ್ ಚಂದ್ರಶೇಖರ್, ವಕೀಲರಾದ ಲಕ್ಷ್ಮಣ್, SDPI ಜಿಲ್ಲಾಧ್ಯಕ್ಷರಾದ ಮುಬಾರಕ್, ಉಪಾಧ್ಯಕ್ಷರಾದ ಮಹಮ್ಮದ್ ತಾಹೇರ್, ಪ್ರಧಾನ ಕಾರ್ಯದರ್ಶಿ ಯಾದ ಅಸ್ರಾರ್ ಉಪಸ್ಥಿತಿರಿದ್ದರು.


Leave A Comment