26
Jul

ಹುಣಸೂರು, ಜು-26-2021: ಹುಣಸೂರು ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ವಾರ್ಡ್ ಸಂಖ್ಯೆ 31ರ ಸದಸ್ಯರು ಹಾಗೂ ಎಸ್.ಡಿ.ಪಿ.ಐ ಪಕ್ಷದ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸೈಯದ್ ಯೂನೂಸ್ ರವರು ಇಂದು ಅಧಿಕೃತವಾಗಿ ಅಧಿಕಾರ ವಹಿಸಿ ಕೊಂಡರು. ಅಧಿಕಾರ ವಹಿಸಿ ಮಾತನಾಡಿದ ಯೂನೂಸ್ ಈ ಸ್ಥಾನ ಅತ್ಯಂತ ಜವಾಬ್ದಾರಿಯುತವಾಗಿದೆ. ಈ ಸ್ಥಾನಕ್ಕೆ ಗೌರವ ತರುವ ನಿಟ್ಟಿನಲ್ಲಿ ಜನಪರ ಕೆಲಸ ಮಾಡಲು ನಾನು ಬದ್ದನಾಗಿದ್ದು, ಸಾರ್ವಜನಿಕರು ಯಾವುದೇ ಮುಲಾಜಿಲ್ಲದೇ ನನ್ನನ್ನು ನೇರವಾಗಿ ಬಂದು ಭೇಟಿ ಮಾಡಬಹುದು. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ಪ್ರಜೆಗೂ ಸರ್ಕಾರಿ ಸೌಲಭ್ಯ ಕೂಡಿಸುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಪದಗ್ರಹಣ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ರಮೇಶ್, ಅಧ್ಯಕ್ಷರಾದ ಶ್ರೀಮತಿ ಅನುಷಾ ರಾಘವೇಂದ್ರ, ಉಪಾಧ್ಯಕ್ಷರಾದ ಚಂದ್ರನಾಯಕ, ಸದಸ್ಯರಾದ ಸಮೀನಾ ಬಾನು ಹಾಗೂ ಇನ್ನಿತರ ನಗರಸಭಾ ಸದಸ್ಯರು, ಮೌಲಾನಾ ಮುಪ್ತಿ ಮುತ್ತಬ್ಬೀರ್ ಸಾಹೇಬ್, ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಜಾಜ್ ಖಾನ್ ಹಾಗೂ ಸಮಾಜದ ಮುಖಂಡರು ಹಾಜರಿದ್ದು ಅಭಿನಂದನೆಗಳನ್ನು ಸಲ್ಲಿಸಿದರು.

Leave A Comment