> ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ, ಅವರಾಗಿಯೇ  ರಾಜಿನಾಮೆ ನೀಡಬೇಕಿತ್ತು

> ಬಿಜೆಪಿ ಶಾಸಕರು ಸಂತೋಷ್ ನಿವಾಸಕ್ಕೆ ಏಕೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ

“ಸಚಿವರು, ಶಾಸಕರು ಭಾಗವಹಿಸುವ ಕರ‍್ಯಕ್ರಮಗಳಿಗೆ ಮುತ್ತಿಗೆ ಹಾಕಿ, ಕಪ್ಪುಬಾವುಟ ಪ್ರರ‍್ಶಿಸುತ್ತೇವೆ ಮತ್ತು ಮುಖ್ಯಮಂತ್ರಿಯ ನಿವಾಸಕ್ಕೂ ಮುತ್ತಿಗೆ ಹಾಕುತ್ತೇವೆ” ಎಂದು ಸೋಷಿಯಲ್ ಡೆಮಾಕ್ರಟಿಕ್ ಪರ‍್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷ ಮಜೀದ್ ಮೈಸೂರು ಹೇಳಿದರು.

ಗುತ್ತಿಗೆದಾರ ಹಾಗೂ ಬಿಜೆಪಿ ಕರ‍್ಯರ‍್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕೆ.ಎಸ್. ಈಶ್ವರಪ್ಪ ರಾಜ್ಯ ರ‍್ಕಾರದಲ್ಲಿ ಮಂತ್ರಿಯಾಗಿರುವುದರಿಂದ ಅವರು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಪ್ರಭಾವ ಬೀರುವ ಸಾಧ್ಯತೆ ಇದೆ. ಆದರಿಂದ ಈ ಪ್ರಕರಣದ ತನಿಖೆಯನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಬೇಕು, ಎಂದು ಸೋಶಿಯಲ್ ಡೆಮಾಕ್ರಟಿಕ್ ಪರ‍್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ.              

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಬ್ದುಲ್ ಮಜೀದ್ , “ಸಚಿವ ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ, ಆದರಿಂದ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕಿತ್ತು. ಅವರು ಉಡಾಫೆ ಮಾತನಾಡುತ್ತಾ ರಾಜೀನಾಮೆಗೆ ನಿರಾಕರಿಸಿದ್ದಾರೆ. ಸಂತೋಷ್ ಕುಮಾರ್ ಅವರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕಳೆದ ನಾಲ್ಕೆದು ತಿಂಗಳಿಂದ ಅವರು ಪಕ್ಷದ ಮುಖಂಡರು, ಕೇಂದ್ರ ಸಚಿವರು, ಮಾಧ್ಯಮ ಮಿತ್ರರನ್ನು ಭೇಟಿಯಾಗಿ ತಮ್ಮ ನೋವು ತೋಡಿಕೊಂಡಿದ್ದರು. ಆದರೆ ಯಾರು ಕೂಡ ಅವರ ನೆರವಿಗೆ ಬಾರಲಿಲ್ಲ. ಕನಿಷ್ಠ ಅವರನ್ನು ಕರೆದು ಮಾತನಾಡಿಸುವ ಸೌಜನ್ಯವನ್ನು ಪ್ರಧಾನಿ ಮೋದಿ ಸಹಿತ ಯಾರು ಕೂಡ ಮಾಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು..

ಮುಸ್ಲಿಂ ಸಮುದಾಯದ ವಿಚಾರವನ್ನು ಇಟ್ಟುಕೊಂಡು ರಂಪಾಟ ಮಾಡುವ, ಬೀದಿಗಿಳಿಯುವ ಸಂಘಪರಿವಾರ ತನ್ನದೇ ಕರ‍್ಯರ‍್ತನಿಗೆ ಅನ್ಯಾಯವಾದಾಗ ಮೌನಕ್ಕೆ ಶರಣಾಗಿರುವುದರ ಉದ್ದೇಶವೇನು ?, ಶಿವಮೊಗ್ಗದಲ್ಲಿ ರ‍್ಷ ಹತ್ಯೆಯಾದಾಗ ಆತನ ಮನೆಗೆ ಭೇಟಿ ನೀಡಿ ಪರಿಹಾರ ನೀಡಿದ ಇಡೀ ರ‍್ಕಾರ ಮತ್ತು ಸಂಘಪರಿವಾರ, ಸಂತೋಷ್ ಅವರ ನಿವಾಸಕ್ಕೆ ಏಕೆ ಭೇಟಿ ನೀಡಿಲ್ಲ, ಸಂತ್ರಸ್ತ ಕುಟುಂಬಕ್ಕೆ ಏಕೆ ಸಾಂತ್ವನ ಹೇಳಿಲ್ಲ? ಇದು ನಿಮ್ಮ ದ್ವಿಮುಖ ಧೋರಣೆಯ ಸುಳ್ಳು ಹಿಂದುತ್ವ ಎಂಬುದು ಜನರಿಗೆ ತಿಳಿದಿದೆ.

ಅದಲ್ಲದೇ, ಬಿಜೆಪಿ ಪಕ್ಷವು ರಾಜ್ಯದ ಜನರ ಮುಂದೆ ಬೆತ್ತಲೆಯಾಗಿದೆ, ತಕ್ಷಣ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು, ಸಂತೋಷ್ ಅವರು ಮಾಡಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆಗೆ ಇಂಜಿನಿಯರ್ ಒಬ್ಬರನ್ನು ನೇಮಿಸಿ ಅವರು ಮಾಡಿರುವ ಕಾಮಗಾರಿಗಳ ಬಿಲ್ ಸಿದ್ಧ ಪಡಿಸಿ ಹಣ ಬಿಡುಗಡೆ ಮಾಡಬೇಕು. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವವರೆಗೆ ಎಸ್‌ಡಿಪಿಐ ರಾಜ್ಯಾದ್ಯಂತ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಸಚಿವರು, ಶಾಸಕರು ಭಾಗವಹಿಸುವ ಕರ‍್ಯಕ್ರಮಗಳಿಗೆ ಮುತ್ತಿಗೆ ಹಾಕಿ, ಕಪ್ಪುಬಾವುಟ ಪ್ರರ‍್ಶಿಸುತ್ತೇವೆ ಹಾಗೂ ಮುಖ್ಯಮಂತ್ರಿಯ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ” ಎಂದು ಅಬ್ದುಲ್ ಮಜೀದ್‌ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಬೆಂಗಳೂರು ಜಿಲ್ಲಾಧ್ಯಕ್ಷ ಮುಜಾಹಿದ್ ಪಾಶಾ, ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಉಪಸ್ಥಿತರಿದ್ದರು.

Leave A Comment