26
Aug


ಈ ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಬಿ. ಆರ್. ಭಾಸ್ಕರ್ ಪ್ರಸಾದ್, ಅಫ್ಸರ್  ಕೊಡ್ಲಿಪೇಟೆ ಅವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಚಳ್ಳಕೆರೆ ಟೋಲ್ ಗೇಟ್ ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಜಿಲ್ಲಾ ಸಮಿತಿ ಮತ್ತು ಕ್ಷೇತ್ರ ಸಮಿತಿ ಹಾಗೂ ಎಲ್ಲಾ ಕಾರ್ಯಕರ್ತರ ವತಿಯಿಂದ ಮೆರವಣಿಗೆಯ ಮೂಲಕ ರಾಜ್ಯ ನಾಯಕರನ್ನು ಸ್ವಾಗತಿಸಲಾಯಿತು. ಮೆರವಣಿಗೆಯ ಸಮಯದಲ್ಲಿ ಮುಖ್ಯ ರಸ್ತೆಯಲ್ಲಿ ಬರುವಂತಹ ವೀರ ಮದಕರಿನಾಯಕ, ಬಾಬ ಸಾಹೇಬ್ ಅಂಬೇಡ್ಕರ್ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪುತ್ತಳಿಗಳಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್ ಅವರು ಪುಷ್ಪಾರ್ಚನೆ ಮಾಡಿದರು.  ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಹೈದರ್ ಷಾ ವಲಿ ದರ್ಗಾಗೆ ಭೇಟಿ ನೀಡಿದರು. ಆ ನಂತರ 12.30ಕ್ಕೆ ಸರಿಯಾಗಿ ಪಕ್ಷದ ಕಚೇರಿಯನ್ನು ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಬಾಳೆಕಾಯಿ ಶ್ರೀನಿವಾಸ್, ರಾಜ್ಯ ಸಮಿತಿ ಸದಸ್ಯರಾದ ಅಕ್ಬರ್ ಅಲಿ ಗಯಾಸುದ್ದಿನ್, ಪ್ರಧಾನ ಕಾರ್ಯದರ್ಶಿಯಾದ ಸೈಯದ್ ಸಾದತ್, ಉಪಾಧ್ಯಕ್ಷರಾದ ಕಮ್ರಾನ್ ಅಲಿ, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಜಾಕಿರ್ ಹುಸೇನ್, ಉಪಾಧ್ಯಕ್ಷರಾದ ಫಾಸಿಲ್ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Comment