05
Aug

1.ದಲಿತ ಸಮುದಾಯದ ಕಲ್ಯಾಣ ಯೋಜನೆಗಳಿಗಾಗಿ SCP-TSP ರೂಪದಲ್ಲಿ ಮೀಸಲಿಟ್ಟಿರುವ 11,000 ಕೋಟಿ ಹಣವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ನಿರ್ಣಯಕ್ಕೆ ಬಂದಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಅದೇ ಸಮುದಾಯದ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಸಮರ್ಥನೆ ನೀಡುತ್ತಿದ್ದಾರೆ. SC ಮತ್ತು ST ಗಳಿಗೆ ಒಟ್ಟು ಬಜೆಟ್ ಹಂಚಿಕೆಯಲ್ಲಿ 24.1 ರಷ್ಟು ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ 2013 ರ ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ-ಹಂಚಿಕೆ ಮತ್ತು ಬುಡಕಟ್ಟು-ಉಪ ಹಂಚಿಕೆ (ಯೋಜನೆ, ಹಂಚಿಕೆ ಮತ್ತು ಹಣಕಾಸು ಸಂಪನ್ಮೂಲಗಳ ಬಳಕೆ) ಕಾಯ್ದೆ ಮತ್ತು 2017 ರ ನಿಯಮಗಳನ್ನು ಅಂಗೀಕರಿಸಿ SCP-TSP ಗೆ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಬೇರೆ ಯಾವುದೇ ಉದ್ದೇಶಗಳಿಗೆ ಬಳಸಬಾರದು ಎಂದು ಈ ಹಿಂದೆ ಇದ್ದ ಸಿದ್ದರಾಮಯ್ಯ ಅವರ ಸರ್ಕಾರವೇ ಮಾಡಿದೆ. ಆದರೆ ಈಗ ಅದೇ ಸಿದ್ದರಾಮಯ್ಯನವರ ಸರ್ಕಾರ ಆ ಆದೇಶವನ್ನು ಗಾಳಿಗೆ ತೂರುತ್ತಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಜನರಿಗೆ ಅನ್ವಯಿಸುವ ಯೋಜನೆಗಳು. ಅದಕ್ಕೆ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಹಣ ಮೀಸಲಿಡಲಾಗಿದೆ. ಆ ಹಣದಿಂದಲೇ ಗ್ಯಾರಂಟಿಗಳಿಗೆ ಹಣ ಒದಗಿಸಬೇಕು. ದಲಿತ ಸಮುದಾಯಕ್ಕೆ ಮಿಸಲಿಟ್ಟಿರುವ ಹಣವನ್ನು ಕೇವಲ ಪೂರ್ವ ಉದ್ದೇಶಿತ ಯೋಜನೆಗಳಿಗೆ ಮಾತ್ರ ಬಳಸಬೇಕು. ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸುವ ಮತ್ತು ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂಬ ಒತ್ತಾಯ ಮಾಡಲಉ ನಿರ್ಧರಿಸಲಾಯಿತು.

  1. ದೇಶದ ಹಲವು ರಾಜ್ಯ ಮತ್ತು ಭಾಗಗಳಲ್ಲಿ ಮತೀಯ ಸಂಘರ್ಷ ಮತ್ತು ಜನಾಂಗೀಯ ಗಲಭೆಗಳು ಭುಗಿಲೆದ್ದಿವೆ. ಮಣಿಪುರದ ಹಿಂಸಾಚಾರ, ಹರಿಯಾಣಾದ ಕೋಮು ಗಲಭೆಗಳು ಮತ್ತು RPF ಯೋಧನಿಂದ ಮಹಾರಾಷ್ಟ್ರದಲ್ಲಿ ರೈಲಿನಲ್ಲಿ ನಡೆದ ನರಹತ್ಯೆ ಪ್ರಕರಣಗಳು ದೇಶವನ್ನು ಬೆಚ್ಚಿ ಬೀಳಿಸಿವೆ. ಈ ಎಲ್ಲ ಹಿಂಸಾಚಾರವನ್ನು ಎಸ್.ಡಿ.ಪಿ.ಐ ಖಂಡಿಸುತ್ತದೆ. ಈ ಘಟನೆಗಳನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ರೈಲಿನಲ್ಲಿ RPF ಯೋಧನ ಹತ್ಯಾಕಾಂಡಕ್ಕೆ ಬಲಿಯಾದವರಲ್ಲಿ ಒಬ್ಬರು ಕರ್ನಾಟಕದ ಬೀದರ್ ಜಿಲ್ಲೆಯವರು. ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿದೆ. ಆದರೆ ಇದು ತುಂಬಾ ಕಡಿಮೆಯಾಗಿದ್ದು, ರಾಜ್ಯ ಸರ್ಕಾರ ಕನಿಷ್ಠ 25 ಲಕ್ಷ ಪರಿಹಾರ ಒದಗಿಸಬೇಕು ಮತ್ತು ಕೇಂದ್ರ ಸರ್ಕಾರವೂ ಅದೇ ಮಟ್ಟದ ಪರಿಹಾರ ಒದಗಿಸಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
  2. ಆಗಸ್ಟ್ 9 ರಂದು ವಿಶ್ವ ಆದಿವಾಸಿ ದಿನ ದ ಅಂಗವಾಗಿ, ಸ್ವಾತಂತ್ರ್ಯ ಪಡೆದು 7 ದಶಕಗಳ ಕಳೆದರೂ ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಬದುಕುತ್ತಿರುವ ಆದಿವಾಸಿಗಳ ಬದುಕು ಮತ್ತು ಬವಣೆ ಬಗ್ಗೆ ಚರ್ಚೆ ನಡೆಸಿ, ವಿಶ್ವ ಆದಿವಾಸಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಮತ್ತು ಆ ಮೂಲಕ ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.
  3. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಹೊಸ ಆಚರಣೆಗಳನ್ನು ಹಿಂಪಡೆದು 1975ಕ್ಕಿಂತ ಮೊದಲು ಜಾರಿಯಲ್ಲಿದ್ದ ಆಚರಣೆಗಳನ್ನು ಯಥಾವತ್ ನಡೆಸಲು ಅವಕಾಶ ಕಲ್ಪಿಸಬೇಕು. ಬಾಬಾಬುಡನ್ಗಿರಿ ದರ್ಗಾ ವಿವಾದ ಸಂಬಂಧ ಸಿವಿಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮತ್ತು ಜಸ್ಟೀಸ್ ನಾಗಮೋಹನ್ ದಾಸ್ ವರದಿಯಂತೆ 1975ಕ್ಕಿಂತ ಹಿಂದಿನ ಆಚರಣೆಗಳಿಗೆ ಕಾಂಗ್ರೆಸ್ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
  4. ಪ್ರಸ್ತುತ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ, ಕೋಮುವಾದಿ ರಾಜಕಾರಣ ಜಾತಿ ರಾಜಕಾರಣ ಸ್ವಜನ ಪಕ್ಷಪಾತ ಮಿತಿಮೀರಿದೆ.
    ರಾಷ್ಟ್ರದಲ್ಲಿ ಮಿತಿಮೀರಿರುವ ಭ್ರಷ್ಟಾಚಾರವನ್ನು ಸಂಪೂರ್ಣ ತೊಡೆದು ಹಾಕಲು ಕಾಂಗ್ರೆಸ್ ಬಿಜೆಪಿ ಇತ್ಯಾದಿ ಪಕ್ಷಗಳಿಗೆ ಯಾವುದೇ ಬದ್ಧತೆ ಇಲ್ಲ.
    ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ದಲಿತರ ಮತ್ತು ಆದಿವಾಸಿಗಳ ಹಿತ ರಕ್ಷಣೆಯಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿವೆ. ರಾಷ್ಟ್ರಕ್ಕೆ ಜನಪರ ಪಕ್ಷವೊಂದರ ಅನಿವಾರ್ಯತೆ ಇದೆ. ಪರ್ಯಾಯ ರಾಜಕಾರಣಕ್ಕೆ ಶಕ್ತಿ ತುಂಬಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಲಾಯಿತು

Leave A Comment