18
Aug

ಪತ್ರಿಕಾ ಪ್ರಕಟಣೆ

ದಲಿತರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಬಿನ್ನವಲ್ಲ ಎಂದು ಉಪೇಂದ್ರ ಪ್ರಕರಣದಲ್ಲಿ ತೋರಿಸಿಕೊಟ್ಟಿದೆ:
ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 14 ಆಗಸ್ಟ್ 2023: ದಲಿತರ ಮೇಲೆ ದೌರ್ಜನ್ಯ ಮತ್ತು ಅವಹೇಳನದ ಪ್ರಕರಣಗಳು ನಡೆದಾಗ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್.ಸಿ / ಎಸ್.ಟಿ ಅಟ್ರಾಸಿಟಿ ಆಕ್ಟ್ ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟಿದೆ. ಆದರೆ ಆಳುವ ಸರ್ಕಾರ ಇಚ್ಛಾಶಕ್ತಿ ತೋರದೆ ಹೋದರೆ ಅದ್ಯಾವುದೂ ಕೂಡ ದಲಿತರ ದೈಹಿಕ ರಕ್ಷಣೆ, ಆತ್ಮಗೌರವದ ರಕ್ಷಣೆಗೆ ಬರಲಾರದು. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಭಿನ್ನವಲ್ಲ ಎಂದು ಉಪೇಂದ್ರ ಪ್ರಕರಣದಲ್ಲಿ ತೋರಿಸಿಕೊಟ್ಟಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ನಟ ಉಪೇಂದ್ರ ಲೈವ್ ಕಾರ್ಯಕ್ರಮವೊಂದರಲ್ಲಿ ಇಡೀ ದಲಿತ ಸಮುದಾಯವನ್ನು ಅವಮಾನಿಸುವ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ರೂಢಿಗತ ಗಾದೆ ಎಂದು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲೂ ಮುಂದಾಗಿರುವುದು ಖಂಡನೀಯ. ಇದು ಜಾತಿ ಹೆಸರಿನಲ್ಲಿ ನಮ್ಮ ಸಾಮಾಜದಲ್ಲಿ ತುಂಬಿರುವ ಅಮಾನವೀಯತೆಯನ್ನು ಪ್ರದರ್ಶಿಸುತ್ತದೆ ಎಂದು ಮಜೀದ್ ಅವರು ಹೇಳಿದ್ದಾರೆ.

ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮ ಇದ್ದರು ನಟ ಉಪೇಂದ್ರ ರನ್ನು ಬಂಧಿಸಲು ಕರ್ನಾಟಕ ಸರ್ಕಾರ ಮತ್ತು ಪೋಲೀಸ್ ಇಲಾಖೆ ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಬದಲಿಗೆ ಅವರು ಕೋರ್ಟ್ ಮೊರೆ ಹೋಗಿ ಎಫ್.ಐ.ಅರ್ ಗಳ ವಿರುದ್ಧ ತಡೆ ಪಡೆಯಲು ಸೂಕ್ತ ವಾತಾವರಣ ಸೃಷ್ಟಿಸಿಕೊಡಲಾಯಿತು ಎಂದು ಮಜೀದ್‌ ಆರೋಪಿದ್ದಾರೆ.

ಇನ್ನು ಸರ್ಕಾರ ಈ ಉದ್ದೇಶಪೂರ್ವಕ ನಿರ್ಲಕ್ಷ್ಯದ ವಿರುದ್ಧ ದಲಿತ ನಾಯಕರು ರಾಜ್ಯದ ಗೃಹಮಂತ್ರಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲು ಹೊರಟಾಗ ಅವರನ್ನು ತಡೆದು, ಅವಾಚ್ಯವಾಗಿ ನಿಂದಿಸಿ, ದೈಹಿಕವಾಗಿ ದೌರ್ಜನ್ಯ ನಡೆಸಲಾಗಿದೆ. ದಲಿತ ನಾಯಕರಾದ ಭಾಸ್ಕರ್ ಪ್ರಸಾದ್, ಹರಿರಾಮ್, ಹರೀಶ್ ಭೈರಪ್ಪ ಸೇರಿದಂತೆ ನ್ಯಾಯಕ್ಕಾಗಿ ಒತ್ತಾಯಿಸಲು ಹೊರಟಿದ್ದವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯಲಾಯಿತು. ಇದು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ ಮಜೀದ್ ಅವರು ಸರ್ಕಾರದ ಈ ನಡವಳಿಕೆ ಖಂಡನೀಯ ಎಂದು ಹೇಳಿದ್ದಾರೆ.

Leave A Comment