22
Aug

ಸಭೆಯ ಭಾಗವಾಗಿ ಈ ಅವಧಿಯಲ್ಲಿ ಮಾಡಿದ ಕಾರ್ಯಚಟುವಟಿಕೆ ವರದಿ ಮಂಡಿಸುವಿಕೆ ಮತ್ತು ಚರ್ಚೆ ಹಾಗೂ ಜಿಲ್ಲಾ ಸಮಿತಿಗೆ ಹೆಸರುಗಳನ್ನು ಸೂಚಿಸಿ, ಚರ್ಚಿಸುವುದರ ಮೂಲಕ  ಅಸ್ತಿತ್ವಕ್ಕೆ  ಬಂದ  ಸಮಿತಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಮಕ್ಸೂದ್ ಮಕಾಂದಾರ್, ಉಪಾಧ್ಯಕ್ಷರಾಗಿ ಮೋಯಿನುದ್ದೀನ್ ಮುಜಾವರ್, ಪ್ರಧಾನ ಕಾರ್ಯದರ್ಶಿಗಳಾಗಿ ಮುಹಯ್ಝಫ್ ಮುಲಾನಿ ಮತ್ತು ನಾಸಿರ್ ಚಾಂದ್ ಶಾಹ್, ಕಾರ್ಯದರ್ಶಿಯಾಗಿ ಜಾಕೀರ್ ನಾಯಿಕ್ವಾಡಿ, ಹಾಗೂ ಕೋಶಾಧಿಕಾರಿಯಾಗಿ ಮುಜಪ್ಫರ್ ಭಾಗ್ವಾನ್ ಆಯ್ಕೆಯಾಗಿದ್ದು ಸಮಿತಿ ಸದಸ್ಯರಾಗಿ ಆಬಿದ್ ಖಾನ್, ಇಮ್ರಾನ್ ಅಥ್ಹರ್, ಮುಫ್ತಿ  ಮುಹಮ್ಮದ್ ಆಸಿಫ್, ಇಸ್ಮಾಯೀಲ್ ವನ್ನೂರ್, ಜಾವೀದ್ ಪಟ್ವೇಗಾರ್, ಆಫ್ತಾಬ್, ತಾಹೀರ್ ಶೇಕ್, ಆಯ್ಕೆಯಾದರು.

ಸಭೆಗೆ ವೀಕ್ಷಕರಾಗಿ ಆಗಮಿಸಿದ ಎಸ್.ಡಿ. ಪೀ.ಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು ರಾಜಕೀಯದ ಅಗತ್ಯತೆ ಮತ್ತು ಪಕ್ಷಕ್ಕೆ ಅಗತ್ಯವಿರುವ ನಾಯಕತ್ವ ಮತ್ತಿದರ ಗುಣಗಳ ಕುರಿತು ವಿಷಯ ಮಂಡಿಸಿದರು.

ಚುನಾವಣಾ ಅಧಿಕಾರಿಯಾಗಿ ಮುಹಮ್ಮದ್ ಆಫ್ಸರ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Leave A Comment