ಸೆಪ್ಟೆಂಬರ್ 17, 2023 ರಂದು ದುಷ್ಕರ್ಮಿಗಳಿಂದ ಕೊಲೆಗೈಯ್ಯಲ್ಪಟ್ಟ ಎಸ್‌ಡಿಪಿಐ ಕಾರ್ಯಕರ್ತ ಗೈಬು ಸಾಬ್ ಮುಲ್ಲಾ ಒಂದು ನೆನಪು: ಅನುಸ್ಮರಣಾ ಸಭೆ ಅಕ್ಟೋಬರ್ 24, 2023 ರಂದು ಬಾಗಲಕೋಟೆಯಲ್ಲಿ ನೆರವೇರಿತು. ಈ ಸಭೆಯಲ್ಲಿ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್‌ ಮಜೀದ್‌, ಜಿಲ್ಲಾಧ್ಯಕ್ಷರಾದ ಯಮನಪ್ಪ ಗುಣದಾಳ್‌, ತೇರದಾಳ ವಿಧಾನಸಭಾ ಕ್ಷೇತ್ರದ ಪರಶುರಾಮ್ ಮೇತ್ರಿ, ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡಂಬು, ಗೈಲು ಸಾಬ್ ರವರ ಸಹೋದರ ಸಿಕಂದರ್ ಮತ್ತು ಇತರ ಜಿಲ್ಲಾ ನಾಯಕರುಗಳು ಉಪಸ್ಥಿತರಿದ್ದರು. ಸಭೆಯ ನಂತರ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜಿದ್ ರವರು ಗೈಲು ಸಾಬ್ ಮುಲ್ಲಾರವರ ಕುಟುಂಬವನ್ನು ಭೇಟಿ ಮಾಡಿದರು.

SDPIKarnataka

Leave A Comment