10
Jun

ಸ್ಪರ್ಧೆಗೆ ರಾಜ್ಯ ನಾಯಕತ್ವಕ್ಕೆ ಶಿಫಾರಸು

ಹಿರಿಯೂರು : 9 ಜೂನ್

ಹಿರಿಯೂರು ವಿಧಾನಸಭಾ ಕ್ಷೇತ್ರದ ಸಂಭವನೀಯ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಸ್‌ಡಿಪಿಐ ಹಿರಿಯೂರು ವಿಧಾನಸಭಾ ಸಮಿತಿ ಹಾಗೂ ಚಿತ್ರದುರ್ಗ ಜಿಲ್ಲಾ ಸಮಿತಿಯ ಸಂಯುಕ್ತ ಸಭೆ ಹಿರಿಯೂರಿನಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಅಡ್ವಕೇಟ್ ಅಫ್ಘಾನ್ ವಹಿಸಿದ್ದರು. ರಾಜ್ಯ ವೀಕ್ಷಿರಾಗಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಖಜಾಂಚಿ ಅಮ್ಮದ್ ಖಾನ್ ಮೈಸೂರು ಹಾಗೂ ಜಿಲ್ಲಾ ಉಸ್ತುವಾರಿ ಫಯಾಜ್ ಅಹಮ್ಮದ್ ರವರು ಉಪಸ್ಥಿತರಿದ್ದರು.

ಸಭೆಯಲ್ಲಿ ಕ್ಷೇತ್ರದ ರಾಜಕೀಯ ಪರಿಸ್ಥಿತಿ, ಪಕ್ಷದ ಸಂಘಟನೆ ಬಲ ಹಾಗೂ ಜನಾಭಿಪ್ರಾಯ ಕುರಿತು ಚರ್ಚೆ ನಡೆಸಿ, ಉಪಚುನಾವಣೆಯಲ್ಲಿ ಎಸ್‌ಡಿಪಿಐ ಸ್ಪರ್ಧಿಸ‌ ಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ನಾಯಕತ್ವಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ಏಕಮತದಿಂದ ಅಂಗೀಕರಿಸಲಾಯಿತು.

ಸಭೆಯ ನಿರ್ಣಯವನ್ನು ರಾಜ್ಯ ವೀಕ್ಷಕರ ಮೂಲಕ ರಾಜ್ಯ ನಾಯಕತ್ವಕ್ಕೆ ಕಳುಹಿಸಲಾಗಿದೆ. ಸಂಘಟನೆ ಬಲವರ್ಧನೆ ಹಾಗೂ ಜನಸಂಪರ್ಕ ಕಾರ್ಯಕ್ರಮಗಳ ಕುರಿತೂ ಚರ್ಚಿಸಲಾಯಿತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಹಿರಿಯೂರು ವಿಧಾನಸಭಾ ಕ್ಷೇತ್ರ ಸಮಿತಿ
ಚಿತ್ರದುರ್ಗ ಜಿಲ್ಲಾ ಸಮಿತಿ

SDPIKarnataka

Previous Post

Leave A Comment