ಜುಲೈ 4: ಮಾಜಿ ಸಚಿವೆ, ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯ್ಕ್ ಅವರಿಗೆ ಕೊಲೆ ಬೆದರಿಕೆ ಬಂದಿರುವುದು ಆತಂಕಕಾರಿ ವಿಷಯ.
ಕರ್ನಾಟಕದಲ್ಲಿ ಹಿರಿಯ ಸಾಹಿತಿ ಎಂ.ಎಂ. ಕಲಬುರ್ಗಿ, ಖ್ಯಾತ ಹೋರಾಟಗಾರ್ತಿ, ಲೇಖಕಿ ಗೌರಿ ಲಂಕೇಶ್ ಹತ್ಯೆಗಳು ನಡೆಯುವ ಮುಂಚೆ ಹಲವಾರು ಸಂದರ್ಭದಲ್ಲಿ ಅವರಿಗೂ ಜೀವ ಬೆದರಿಕೆ ಕರೆಗಳು, ಬೆದರಿಕೆ ಪತ್ರಗಳು ಬಂದಿದ್ದವು. ಆದರೆ ಅಂದಿನ ಸರ್ಕಾರ ಅವರಿಗೆ ಸೂಕ್ತ ರಕ್ಷಣೆ ಕೊಡಲಿಲ್ಲ ಮತ್ತು ಆ ಬಗ್ಗೆ ನಿರ್ಲಕ್ಷ್ಯ ವಹಿಸಿತು. ಈ ಕಾರಣದಿಂದಾಗಿ ನಾಡಿನ ಘನ ವ್ಯಕ್ತಿತ್ವಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಇಂದು ಅದೇ ಸ್ವರೂಪದ ಜೀವ ಬೆದರಿಕೆ ಕರೆಗಳು, ಪತ್ರಗಳು ಬಿ.ಟಿ ಲಲಿತಾ ನಾಯ್ಕ್ ಅವರಿಗೆ ಬಂದಿವೆ. ಸರಕಾರ ಮತ್ತು ಸಂಬಂಧ ಪಟ್ಟ ಇಲಾಖೆ ಕೂಡಲೇ ಎಚ್ಚೆತ್ತು ಕೊಂಡು ಇದರ ಹಿಂದಿನ ಕೈಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಮತ್ತು ಬಿ.ಟಿ ಲಲಿತಾ ನಾಯ್ಕ್ ಅವರಿಗೆ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಿ ಅವರ ಸುರಕ್ಷತೆಯನ್ನು ಖಾತರಿ ಪಡಿಸಬೇಕೆಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಆಗ್ರಹಿಸಿದ್ದಾರೆ.
![](https://sdpikarnataka.in/wp-content/uploads/2022/07/IMG-20220704-WA0044-750x400.jpg)