21
May

ಬಾದಾಮಿ. (ಮೇ-20): ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೇರದಾಳ ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಸಮಿತಿಯ ವಿಧಾನಸಭಾ ಚುನಾವಣೆ ಅವಲೋಕನ ಸಭೆ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಯಮನಪ್ಪ ಗುಣದಾಳ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, ಉಪಸ್ಥಿತಿಯಲ್ಲಿ ನಡೆಯಿತು.
ಅವಲೋಕನ ಸಭೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಇಡೀ ರಾಜ್ಯದ ಜನರು ಮಾನಸಿಕವಾಗಿ ತಯಾರಾಗಿದ್ದ ಪ್ರತಿಕೂಲ ಪರಿಸ್ಥಿತಿಯಲ್ಲಿ ಆಮಿಷ ಗಳ ಅಲೆಯ ನಡುವೆ, ಅಗತ್ಯ ಸಂಪನ್ಮೂಲಗಳ ಕೊರತೆಯ ನಡುವೆಯೂ ನಮ್ಮ ನಿರೀಕ್ಷಿತ ಮಟ್ಟದ ಗುರಿ ತಲುಪಲು ನಾವು ಎಡವಿದ್ದು ಎಲ್ಲಿ? ಮತ್ತು ನಮ್ಮ ಗುರಿಯತ್ತ ಸಾಗಲು ಅಡೆತಡೆಯಾದ ಬಾಹ್ಯ ಅಂಶಗಳು ಯಾವುವು? ಅದನ್ನು ಮುಂದಿನ ಚುನಾವಣೆಗಳಲ್ಲಿ ನಾವು ಹೇಗೆ ಅತಿಜಯಿಸಬೇಕು? ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮತ್ತು ಆಗಿರುವ ಕೊರತೆಗಳನ್ನು ನೀಗಿಸಿಕೊಂಡು ಮುಂಬರಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಹೇಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಬೂತ್ ಸಮಿತಿಗಳ ಬಲವರ್ದನೆಯ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಜಮಾದಾರ ಸಮಿತಿ ಪದಾಧಿಕಾರಿಗಳು, ಬ್ಲಾಕ್ ಸಮಿತಿ ಪದಾಧಿಕಾರಿಗಳು, ಚುನಾವಣಾ ಉಸ್ತುವಾರಿಗಳು, ಪಕ್ಷದ ಹಿರಿಯರು ಉಪಸ್ಥಿತರಿದ್ದರು.

SDPIBagalkote

SdpiRealAlternative

Previous Post

Leave A Comment