25
May

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 16 ಕಡೆ ಸ್ಪರ್ಧಿಸಿದ್ದು ನಿರೀಕ್ಷೆಗಿಂತ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಚುನಾವಣೆಯ ಫಲಿತಾಂಶದ ಕುರಿತಾದ ಅವಲೋಕನ ಸಭೆ ಬೆಂಗಳೂರಿನಲ್ಲಿ ದಿನಾಂಕ 23 ಮೇ 2023 ರಂದು ನಡೆಯಿತು. ಈ ಸಭೆಯಲ್ಲಿ ಪಕ್ಷದ ಮುಂದಿನ ಚುನಾವಣಾ ಯೋಜನೆಗಳ ಬಗ್ಗೆಯೂ ಸಹ ವಿಸ್ತೃತವಾಗಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್‌ ಮಜೀದ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್‌ ಲತೀಫ್ ಪುತ್ತೂರು, ರಾಷ್ಟ್ರೀಯ ಚುನಾವಣಾ ವೀಕ್ಷಕರಾದ ದೆಹ್ಲಾನ್ ಬಾಖಾವಿ, ರಾಷ್ಟ್ರೀಯ ಸಮಿತಿ ಸದಸ್ಯರುಗಳಾದ ಅಲ್ಪಾನ್ಸ್ ಫ್ರಾಂಕೋ, ಅಬ್ದುಲ್ ಹನ್ನಾನ್ ಮತ್ತು ಇತರೆ ಮುಖಂಡರು ಭಾಗವಹಿಸಿದ್ದರು.

Previous Post

Next Post

Leave A Comment