21
Jun

(ಜೂನ್ 21)

ಪಕ್ಷದ 15 ನೇ ಸಂಸ್ಥಪನಾ ದಿನಾಚರಣೆ ಶುಭಾಶಯಗಳು

“ಚಳುವಳಿ ರೂಪದ ರಾಜಕೀಯ ಬಹಳ ತ್ರಾಸದಾಯಕ ಮಾರ್ಗ, ಜನರ ನಡುವಿನಿಂದ ನಾಯಕತ್ವ ಪಕ್ವ ಮಾಡಿಕೊಂಡು ಜನರ ಪ್ರತಿ ಸಂಕಷ್ಟ ನೋವಿಗೆ ಸ್ಪಂದಿಸುತ್ತಾ, ಅವಶ್ಯಕತೆ ಬಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು, ಜೀವವನ್ನೂ ಲೆಕ್ಕಿಸದೆ ಜನರ ರಕ್ಷಣೆ, ಸೇವೆಗೆ ನಿಲ್ಲುವುದು, ಅದರ ಜೊತೆಗೇ ರಾಜಕೀಯ ಅಧಿಕಾರ ಹಿಡಿಯುವ ಕನಸು ಹೊತ್ತಿರುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ಎಸ್.ಡಿ.ಪಿ.ಐ. ಅಂತಹ ಶ್ರೇಷ್ಠ ಗುರಿಯ ಭಾಗವಾಗಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಈ ಗುರಿಯ ಬೆನ್ನು ಹತ್ತಿ ಇಂದಿಗೆ 14 ವರ್ಷ ಪೂರೈಸಿ 15ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಈ ಪಕ್ಷದ ತತ್ವ ಸಿದ್ದಾಂತಕ್ಕಾಗಿ ಶ್ರಮಿಸಿದ, ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಪ್ರತಿ ಕ್ಷಣ ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬ ಕಾರ್ಯಕರ್ತರಿಗೂ ನಮ್ಮೆಲ್ಲರ ಕಡೆಯಿಂದ ಪ್ರೀತಿಯ ಧನ್ಯವಾದಗಳು ಮತ್ತು 15ನೇ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.”

Leave A Comment